ನವದೆಹಲಿ: ರೈತರ ಪ್ರತಿಭಟನೆಯಿಂದಾಗಿ 12 ನೇ ತರಗತಿ ಪರೀಕ್ಷೆ ಮುಂದೂಡಿಕೆಯಾಗಿದೆ ಎಂದು ವದಂತಿಗಳು ಹಬ್ಬಿದ್ದವು. ಈ ಹಿನ್ನೆಲೆ ನಕಲಿ ಮಾಹಿತಿಯ ವಿರುದ್ಧ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಎಚ್ಚರಿಕೆ ನೀಡಿದೆ.
ಇದೊಂದು ದಾರಿತಪ್ಪಿಸುವ ಸುಳ್ಳು ಸುದ್ದಿಯಾಗಿದೆ ಮತ್ತು ಮಂಡಳಿಯು ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಮಂಡಳಿ ಹೇಳಿದೆ.
“ರೈತರ ಪ್ರತಿಭಟನೆಯಿಂದಾಗಿ ಮಕ್ಕಳು ಶಾಲೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಮಂಡಳಿಯ ಗಮನಕ್ಕೆ ಬಂದಿದೆ, ಆದ್ದರಿಂದ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ ಹೊಸ ದಿನಾಂಕಗಳೊಂದಿಗೆ ನಿಮಗೆ ತಿಳಿಸಲಾಗುವುದು ಎಂಬ ಫೇಕ್ ನೋಟಿಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ಮಂಡಳಿ ಸ್ಪಷ್ಟನೆ ನೀಡಿದ್ದು, ಮಂಡಳಿಯು ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ, ಇದು ಸುಳ್ಳು ಮಾಹಿತಿಯಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಇತ್ತೀಚೆಗೆ, ಮಂಡಳಿಯು ಕೆಲವು ಸಿಬಿಎಸ್ಇ ಎಕ್ ಖಾತೆಗಳು ನಕಲಿ ಎಂದು ಕಂಡುಬಂದಿದೆ ಎಂದು ನೋಟಿಸ್ ನೀಡಿದೆ. ಸಿಬಿಎಸ್ಇ ಪ್ರಕಾರ, ಕೆಲವರು ಮಂಡಳಿಯ ಹೆಸರು ಮತ್ತು ಅದರ ಲೋಗೋವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮಂಡಳಿಯ ಅಧಿಕೃತ ಖಾತೆ ಎಂದು ಹೇಳಿಕೊಳ್ಳುವ ಸುಮಾರು 30 ಎಕ್ಸ್ ಹ್ಯಾಂಡಲ್ ಗಳನ್ನು ಮಂಡಳಿಯು ಪಟ್ಟಿ ಮಾಡಿದೆ.