ಚಿಕ್ಕಮಗಳೂರು : ರಾಜ್ಯದಲ್ಲಿ ಪಟಾಕಿ ದುರಂತಕ್ಕೆ ಮತ್ತೊಂದು ಬಲಿಯಾಗಿದ್ದು, ಬೆಂಗಳೂರಲ್ಲಿ ಸುಮಾರು 60 ಮಂದಿಗೆ ಗಾಯಗಳಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ಪ್ರದೀಪ್ ಎಂಬುವವರು ಮೃತಪಟ್ಟಿದ್ದಾರೆ.
ಚೇರ್ ಕೆಳಗೆ ಪಟಾಕಿಯ ಬ್ಯಾಗ್ ಇರಿಸಿ ಚೇರ್ ಮೇಲೆ ಪ್ರದೀಪ್ ಕುಳಿತಿದ್ದರು.ಈ ವೇಳೆ ಹೊರಗಡೆಯಿಂದ ಬಂದ ಪಟಾಕಿಯ ಕಿಡಿ ಬ್ಯಾಗ್ ಗೆ ತಗುಲಿ ಪಟಾಕಿ ಸ್ಪೋಟಗೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರದೀಪ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಪ್ರದೀಪ್ ಜೊತೆಗಿದ್ದ ಮೂವರು ಮಕ್ಕಳಿಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ .
ಬೆಂಗಳೂರಿನಲ್ಲಿ 60ಕ್ಕೂ ಹೆಚ್ಚು ಗಾಯ
ಸೋಮವಾರ 13 ಕ್ಕೂ ಹೆಚ್ಚು ಪಟಾಕಿ ಗಾಯಗಳ ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 60 ಕ್ಕೆ ಏರಿದೆ. ಮಿಂಟೋ ನೇತ್ರ ಆಸ್ಪತ್ರೆಗೆ ಸಾಗಿಸಲಾದ ಮೂವರು ರೋಗಿಗಳಿಗೆ ತೀವ್ರ ಗಾಯಗಳಾಗಿವೆ. ಮಿಂಟೋ ನೇತ್ರ ಆಸ್ಪತ್ರೆಯ ನಿರ್ದೇಶಕರು ಈ ಬಗ್ಗೆ ಮಾಹಿತಿ ನೀಡಿದ್ದು, ಗಾಯದಿಂದಾಗಿ ಒಬ್ಬ ರೋಗಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ.
“ಪಟಾಕಿ ಗಾಯಗಳಿಂದ ಬಳಲುತ್ತಿರುವ ಮೂವರು ರೋಗಿಗಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಕೆಲವು ದಿನಗಳವರೆಗೆ ನಿಗಾದಲ್ಲಿರಬೇಕಾಗುತ್ತದೆ. ಸೋಮವಾರ ಸಂಜೆಯವರೆಗೆ ಪಟಾಕಿ ಗಾಯಗಳ ಒಂಬತ್ತು ಪ್ರಕರಣಗಳು ನಮಗೆ ಬಂದಿವೆ” ಎಂದು ಮಿಂಟೋ ನೇತ್ರ ಆಸ್ಪತ್ರೆಯ ನಿರ್ದೇಶಕ ಜಿ ನರರಾಜು ಹೇಳಿದ್ದಾರೆ.
ನಾರಾಯಣ ನೇತ್ರಾಲಯ ಕಣ್ಣಿನ ಆಸ್ಪತ್ರೆಯ ನಿರ್ದೇಶಕ ಡಾ.ರೋಹಿತ್ ಶೆಟ್ಟಿ ಮಾತನಾಡಿ, ಬಿಹಾರ ಮೂಲದ ಆರು ವರ್ಷದ ಬಾಲಕನನ್ನು ಕಣ್ಣಿಗೆ ಗಾಯವಾದ ನಂತರ ಪೋಷಕರು ಬೆಂಗಳೂರಿಗೆ ಕರೆತಂದಿದ್ದಾರೆ. ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಡಾ.ಶೆಟ್ಟಿ ತಿಳಿಸಿದ್ದಾರೆ.