ಬೆಂಗಳೂರು : ನಟ ದರ್ಶನ್ ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ 9 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ದರ್ಶನ್ ಗೆ ವಿಶೇಷ ಸವಲತ್ತು ನೀಡಿದ ಮುಖ್ಯ ಅಧೀಕ್ಷಕ, ಜೈಲರ್ ಗಳು , ಸೇರಿ 9 ಮಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.
ಜೈಲಿನ ಮುಖ್ಯ ಅಧೀಕ್ಷಕ ಶೇಷ ಮೂರ್ತಿ, ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ, ಕಾರಾಗೃಹದ ಭದ್ರತಾ ವಿಭಾಗದ ಉಸ್ತುವಾರಿ ಜೈಲರ್ ಪ್ರಭು ಎಸ್ ಖಂಡ್ರೆ, ಜೈಲರ್ಗಳಾದ ಶರಣ ಬಸವ ಅಮೀನಗಡ, ಸಹಾಯಕ ಜೈಲರ್ಗಳಾದ ಎಸ್ ಎಲ್ ತಿಪ್ಪೇಸ್ವಾಮಿ, ಶ್ರೀಕಾಂತ್ ತಳವಾರ್, ಮುಖ್ಯ ವೀಕ್ಷಕ ರಾದ ಸಂಪತ್ ಕುಮಾರ್ ಕಡಪಟ್ಟಿ, ಯಂಕಪ್ಪ ಕೊರ್ತಿ ಹಾಗೂ ವೀಕ್ಷಕ ಬಸಪ್ಪ ತೇಲಿ ಸೇರಿ 9 ಮಂದಿ ಅಮಾನತುಗೊಂಡಿದ್ದಾರೆ.ನಟ ದರ್ಶನ್ ವಿಶೇಷ ಸೌಲಭ್ಯ ವಿಚಾರ ತಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಡಿಜಿಪಿ ಮಾಲಿನಿ ಕೃಷ್ಣ ಮೂರ್ತಿ ಅವರನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದರು. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು.
ನಟ ದರ್ಶನ್ ಸ್ಪೆಷಲ್ ಬ್ಯಾರಕ್ ನಿಂದ ಹೊರ ಬಂದು ಟೇಬಲ್, ಚೇರ್ ಹಾಕಿಕೊಂಡು ವಿಲ್ಸನ್ ಗಾರ್ಡನ್ ನಾಗ ಹಾಗೂ ಮತ್ತಿತರರ ಜೊತೆ ಸಿಗರೇಟ್ ಸೇದುತ್ತಾ, ಕಾಫಿ ಮಗ್ ಹಿಡಿದು ನಗುತ್ತಾ ಕುಳಿತಿರುವ ಫೋಟೋ ವೈರಲ್ ಆಗಿದೆ. ಅಲ್ಲದೇ ದರ್ಶನ್ ಗೆ ಜೈಲಿನಿಂದಲೇ ವಿಡಿಯೋ ಕಾಲ್ ಮಾಡುವ ವ್ಯವಸ್ಥೆಯೂ ಆಗಿದೆ .