ಕೋಲ್ಕತ್ತಾ : ಕೋಲ್ಕತ್ತಾ ಸಂತ್ರಸ್ತ ವೈದ್ಯೆಯ ದೇಹದಲ್ಲಿ ಪತ್ತೆಯಾಗಿದ್ದು 150 ಗ್ರಾಂ ವೀರ್ಯ ಅಲ್ಲ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಕೋಲ್ಕತ್ತಾ ಸಂತ್ರಸ್ತ ವೈದ್ಯೆಯ ದೇಹದಲ್ಲಿ 150 ಗ್ರಾಂ ವೀರ್ಯ ಪತ್ತೆಯಾಗಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಕುರಿತು ಸ್ಪಷ್ಟನೆ ನೀಡಿದ ವೈದ್ಯರು ವೈದ್ಯರ ವರದಿಯಲ್ಲಿ ಉಲ್ಲೇಖಿಸಲಾದ 150 ಗ್ರಾಂ ಎಂಬುದು ಗರ್ಭಾಶಯದ ತೂಕವೇ ಹೊರತು , ಯಾವುದೇ ದ್ರವದ ತೂಕ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೋಲ್ಕತ್ತಾದ ಅತ್ಯಾಚಾರ-ಕೊಲೆಗೆ ಬಲಿಯಾದ ಮಹಿಳೆಯ ದೇಹದಲ್ಲಿ 150 ಗ್ರಾಂ ವೀರ್ಯ ಪತ್ತೆಯಾಗಿದೆ ಎಂಬ ವರದಿಗಳನ್ನು ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಕುಮಾರ್ ಗೋಯಲ್ ಕೂಡ ನಿರಾಕರಿಸಿದ್ದರು. ಮೂವರು ಸದಸ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದ್ದು, ವಿಡಿಯೋದಲ್ಲಿದೆ. ಸಿಬಿಐ ತನಿಖೆ ನಡೆಸಿದೆ. ಪಾರದರ್ಶಕತೆಗೆ ಸಂಬಂಧಿಸಿದಂತೆ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ.