ಲಾಸ್’ಏಂಜಲೀಸ್ ನಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸುತ್ತಿದ್ದು, ಸಾವಿನ ಸಂಖ್ಯೆ 11 ಕ್ಕೇರಿಕೆಯಾಗಿದೆ.
ಬೆಂಕಿಯ ಜ್ವಾಲೆಗೆಹಾಲಿವುಡ್ ನಟ-ನಟಿಯರ ಮನೆಗಳು ಸುಟ್ಟುಭಸ್ಮವಾಗಿದೆ.
ಜನವರಿ 7 ರಂದು ಪ್ರಾರಂಭವಾದ ಭಾರಿ ಬೆಂಕಿ ತಕ್ಷಣ ನಗರದಾದ್ಯಂತ ಹರಡಿತು ಮತ್ತು ಬೆಂಕಿಯು ಹಾಲಿವುಡ್ ಬೆಟ್ಟಗಳಿಗೆ ಹರಡಿದ ಹಿನ್ನೆಲೆ ಹಲವಾರು ಹಾಲಿವುಡ್ ಸೆಲೆಬ್ರಿಟಿಗಳನ್ನು ತಮ್ಮ ಮನೆಯನ್ನು ತೊರೆದಿದ್ದಾರೆ.
ವರದಿ ಪ್ರಕಾರ, ಪಾಲಿಸೇಡ್ಸ್ ಫೈರ್ನಿಂದ ಐದು ಮತ್ತು ಈಟನ್ ಫೈರ್ನಿಂದ ಆರು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಅಧಿಕಾರಿಗಳು ನಿರೀಕ್ಷಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿ ಭೀಕರ ಕಾಡ್ಗಿಚ್ಚು ಪ್ರಾರಂಭವಾಗುವ ಒಂದು ವಾರದ ಮೊದಲು, ಮೇಯರ್ ಕರೆನ್ ಬಾಸ್ ನಗರದ ಅಗ್ನಿಶಾಮಕ ಇಲಾಖೆಯ ಬಜೆಟ್ನಲ್ಲಿ ಹೆಚ್ಚುವರಿ 49 ಮಿಲಿಯನ್ ಡಾಲರ್ ಕಡಿತಗೊಳಿಸಲು ಆದೇಶಿಸಿದ್ದಾರೆ ಎಂದು ವರದಿ ತಿಳಿಸಿದೆ .