alex Certify BIG NEWS : ಕಾರ್ಕಳದ ಪರಶುರಾಮನ ಕಂಚಿನ ಪ್ರತಿಮೆ ವಿವಾದಕ್ಕೆ ಬಿಗ್ ಟ್ವಿಸ್ಟ್ : ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಕಾರ್ಕಳದ ಪರಶುರಾಮನ ಕಂಚಿನ ಪ್ರತಿಮೆ ವಿವಾದಕ್ಕೆ ಬಿಗ್ ಟ್ವಿಸ್ಟ್ : ವಿಡಿಯೋ ವೈರಲ್

ಬಿಜೆಪಿ ಸರ್ಕಾರ 8 ತಿಂಗಳ ಹಿಂದೆ ಉದ್ಘಾಟನೆ ಮಾಡಿದ್ದ ಪರಶುರಾಮ ಥೀಮ್ ಪಾರ್ಕ್  ನ 33 ಅಡಿ ಎತ್ತರದ ಪರಶುರಾಮನ  ಕಂಚಿನ  ಮೂರ್ತಿ ರಾತ್ರೋರಾತ್ರಿ ನಾಪತ್ತೆ ಆಗಿದೆ ಎಂದು ಹೇಳಲಾಗಿತ್ತು, ಈ ವಿಚಾರ ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಈ ವಿಚಾರಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪರಶುರಾಮನ ಕಂಚಿನ ಪ್ರತಿಮೆಯನ್ನು ಎತ್ತುತ್ತಿರುವ ವಿಡಿಯೋ ವೈರಲ್ ಆಗಿದೆ. ಕಂಚಿನದ್ದು ಎನ್ನಲಾದ ಪ್ರತಿಮೆಯನ್ನು ಗ್ರಾಸ್ ಫೈಬರ್ ಹಾಗೂ ಪಿಒಪಿಯಿಂದ ನಿರ್ಮಾಣ ಮಾಡಲಾಗಿತ್ತು ಎಂಬ ಆರೋಪ ಬಂದಿತ್ತು. ಈ ವಿಚಾರ ತೀವ್ರ ಚರ್ಚೆಗೆ ಒಳಗಾಗಿತ್ತು. ಈ ವಿಚಾರಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು ಕಂಚಿನ ಪ್ರತಿಮೆಯನ್ನು ಕ್ರೇನ್ ಮೂಲಕ ಸಲೀಸಾಗಿ ಎತ್ತುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಪ್ರತಿಮೆ ಸ್ಥಾಪನೆಯ ಸಂದರ್ಭದಲ್ಲಿ ಚಿತ್ರೀಕರಣ ಮಾಡಿದ್ದೇ ಅಥವಾ ಪ್ರತಿಮೆ ತೆರವುಗೊಳಿಸುವಾಗ ಚಿತ್ರೀಕರಣ ಮಾಡಿದ್ದೆ? ಎಂಬ ಅನುಮಾನ ಮೂಡಿದೆ.

ಟನ್ ಗಟ್ಟಲೆ ತೂಕದ ಪ್ರತಿಮೆ ಎಷ್ಟು ಭಾರ ಇರಬೇಕು, ಇಲ್ಲಿ ಕ್ರೇನ್ ಬೆಲ್ಟ್ ನಲ್ಲಿ ಬೊಂಬೆ ಎತ್ತಿದಂತೆ ಕಾಣುತ್ತಿದೆ ಎಂದು ಜನರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರತಿಮೆ ಅಸಲಿಯೇ, ವೀಡಿಯೋ ಅಸಲಿಯೇ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿದೆ.

1) ಈ ವಿಡಿಯೋ ಪ್ರತಿಮೆ ಸ್ಥಾಪನೆಯ ಸಂದರ್ಭದಲ್ಲಿ ಚಿತ್ರೀಕರಣ ಮಾಡಿದ್ದೇ ಅಥವಾ ಪ್ರತಿಮೆ ತೆರವುಗೊಳಿಸುವಾಗ ಚಿತ್ತೀಕರಣ ಮಾಡಿದ್ದೆ?

2) ಈ ವಿಡಿಯೋದಲ್ಲಿ ದಾಖಲಾಗಿರುವಂತೆ ಕೈನ್ ಮೂಲಕ ಎತ್ತಿದ ಪರಶುರಾಮನ ಎದೆಯ ಮೇಲಿನ ಭಾಗ ಕಂಚಿನದ್ದೇ ?

3) ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿಯವರು ಉದ್ಘಾಟಿಸಿದ್ದ ಪರಶುರಾಮನ ಪ್ರತಿಮೆ ಸಂಪೂರ್ಣ ಕಂಚಿನದ್ದೇ?

4) ಪ್ರತಿಮೆಯ ಮೇಲ್ಬಾಗ ತೆರವು ವಿಚಾರವಾಗಿ ಜಿಲ್ಲಾಡಳಿತ, ಪೋಲೀಸ್, ಮತ್ತು ನಿರ್ಮಿತಿ ಕೇಂದ್ರ ಮೇಲೆ  ಒತ್ತಡ ಹೇರಲಿಲ್ಲವೇ?

5) ಕಾಂಗ್ರೆಸ್ ಅನುದಾನ ತಡೆ ಹಿಡಿದಿದೆ ಎಂದ ಹೇಳಿದ ತಮ್ಮ ಆರೋಪ ಸರಿಯೇ? ಪ್ರತಿಮೆ ಅಸಲಿಯೇ, ವೀಡಿಯೋ ಅಸಲಿಯೇ ತನಿಖೆಯಾಗಲಿ ಎಂದು  ಸಾರ್ವಜನಿಕರು   ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೈಲೂರು ಸಮೀಪದ ಉಮಿಕಲ್ಲು ಬೆಟ್ಟದ ಮೇಲಿನ ಈ 33 ಅಡಿ ಎತ್ತರದ ಪರಶುರಾಮ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಪರಶುರಾಮ ಥೀಮ್ ಪಾರ್ಕ್ ಇದೇ ಜ. 27ರಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಗೊಂಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...