ಬೆಂಗಳೂರು : ಬಿಟ್ ಕಾಯಿನ್ ಹಗರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸ್ ಅಧಿಕಾರಿಗಳ ಮನೆ ಮೇಲೆಯೇ ಸಿಐಡಿಯ ಎಸ್ ಐ ಟಿ ತಂಡ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಬೊಮ್ಮನಹಳ್ಳಿ, ಕೋರಮಂಗಲ ಸೇರಿ 7 ಕಡೆ ಎಸ್ ಐ ಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಹಿಂದೆ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿಗಳ ನಿವಾಸದ ಮೇಲೆ ಎಸ್ ಐ ಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಸಿಐಡಿ ಎಸ್ ಐಟಿ ಅಧಿಕಾರಿಗಳು ಬೆಳ್ಳಂ ಬೆಳಗ್ಗೆಯೇ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಒಟ್ಟು ಐವರಿಗೆ ಸಂಭಂಧಿಸಿದ ಏಳು ಕಡೆ ದಾಳಿ ನಡೆದಿದೆ. ಈ ಮೂಲಕ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಿದ್ದ ಪೊಲೀಸರಿಗೆ ನಡುಕ ಶುರುವಾಗಿದೆ.
ಇತ್ತೀಚೆಗೆ ಪ್ರಕರಣ ಸಂಬಂಧ ನಾಲ್ಕು ವರ್ಷಗಳಿಂದ ಭೂಗತವಾಗಿದ್ದ ಪಂಜಾಬ್ ಮೂಲದ ಇಂಟರ್ ನ್ಯಾಷನಲ್ ಹ್ಯಾಕರ್ ರಾಜೇಂದ್ರ ಸಿಂಗ್ ಎಂಬಾತನನ್ನು ಎಸ್ಐಟಿ ಟೀಂ ಬಂಧಿಸಿದೆ. ರಾಜೇಂದ್ರ ಸಿಂಗ್ ಮೇಲೆ ಸರ್ಕಾರಿ ಹಾಗೂ ಖಾಸಗಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುತ್ತಿರುವ ಆರೋಪವಿದೆ. ಹ್ಯಾಕರ್ ಶ್ರೀಕಿಯಿಂದ ಸುಮಾರು 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ವಶಕ್ಕೆ ಪಡೆಯಲಾಗಿತ್ತು. ಈ ತನಿಖೆ ವೇಳೆಯಲ್ಲಿ ಪಂಜಾಬ್ ಮೂಲದ ರಾಜೇಂದ್ರ ಸಿಂಗ್ ಹೆಸರು ಕೇಳಿ ಬಂದಿದ್ದರಿಂದ ಎಸ್ಐಟಿ ರಾಜೇಂದ್ರ ಸಿಂಗ್ ನನ್ನು ಬಂಧಿಸಿದೆ.