alex Certify ಚೀಟಿ ಕಟ್ಟಿದವರಿಗೆ ಬಿಗ್ ಶಾಕ್: 7 ಕೋಟಿ ರೂ. ವಂಚಿಸಿ ಮಹಿಳೆ ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀಟಿ ಕಟ್ಟಿದವರಿಗೆ ಬಿಗ್ ಶಾಕ್: 7 ಕೋಟಿ ರೂ. ವಂಚಿಸಿ ಮಹಿಳೆ ಪರಾರಿ

ದೊಡ್ಡಬಳ್ಳಾಪುರ:  ಚೀಟಿ ವ್ಯವಹಾರ ನಡೆಸುತ್ತಿದ್ದ ಮಹಿಳೆ 7 ಕೋಟಿ ರೂಪಾಯಿ ಇಡುಗಂಟಿನೊಂದಿಗೆ ಪರಾರಿಯಾದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಮುಕ್ತಾಂಬಿಕಾ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪುಷ್ಪಕಲಾ ಎಂಬಾಕೆ ವಿರುದ್ಧ ಮೋಸ ಹೋದ ಜನ ದೂರು ಸಲ್ಲಿಸಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ನಿಯಮಿತವಾಗಿ ಚೀಟಿ ವ್ಯವಹಾರ ನಡೆಸುತ್ತಿದ್ದ ಪುಷ್ಪಲತಾ ಅವರನ್ನು ನಂಬಿದ ಅನೇಕರು ಚೀಟಿ ಕಟ್ಟಿದ್ದಾರೆ.

ಮದುವೆ, ಮನೆ ನಿರ್ಮಾಣ ಸೇರಿ ಇತರೆ ವ್ಯವಹಾರಕ್ಕೆ 250ಕ್ಕೂ ಹೆಚ್ಚು ಮಂದಿ ಚೀಟಿಯಲ್ಲಿ ಹಣ ಹಾಕಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಮಹಿಳೆ ಹಣದ ಸಮೇತ ಅಕ್ಟೋಬರ್ 27ರಂದು ಮನೆಯಿಂದ ನಾಪತ್ತೆಯಾಗಿದ್ದಾಳೆ. ವಂಚನೆಗೊಳಗಾದವರು ದೂರು ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...