![](https://kannadadunia.com/wp-content/uploads/2024/01/karntaka-govrment.jpg)
ಬೆಂಗಳೂರು : ಸರ್ಕಾರಿ ಭೂಮಿ ಕಬಳಿಸುವವರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದೆ. ರಾಜ್ಯಾದ್ಯಂತ ಸರ್ಕಾರಿ ಜಮೀನುಗಳ ಒತ್ತುವರಿ, ಕಬಳಿಕೆ ತಡೆಗೆ ‘ಬೀಟ್’ ವ್ಯವಸ್ಥೆ ಜಾರಿ ಮಾಡುತ್ತಿದೆ.
ಈ ಕುರಿತು ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರವು ಎಲ್ಲ ಸರ್ಕಾರಿ ಭೂಮಿಯ ಮಾಹಿತಿ (ಡೇಟಾ ಬೇಸ್) ಸಿದ್ಧಪಡಿಸಿದೆ. ಈ ಜಮೀನುಗಳ ಸ್ಥಳ, ವಿಸ್ತೀರ್ಣ, ಆಕಾರ್ ಬಂದ್ ಸಿದ್ಧಪಡಿಸಲು ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. ಈ ಆ್ಯಪ್ ಬಳಸಿ ಸರ್ಕಾರಿ ಜಾಗಗಳ ನಕ್ಷೆ ಸಿದ್ಧಪಡಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲು ಕಂದಾಯ ಅಧಿಕಾರಿಗಳಿಗೆ ಮಾರ್ಚ್ ತಿಂಗಳಾಂತ್ಯದವರಗೆ ಗಡುವು ನೀಡಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯಾದ್ಯಂತ ಸರ್ಕಾರಿ ಜಮೀನುಗಳ ಸ್ಥಳ, ವಿಸ್ತೀರ್ಣ ಮತ್ತು ನಕ್ಷೆಯನ್ನು ಮೊಬೈಲ್ ಆ್ಯಪ್‌ನಲ್ಲಿ ದಾಖಲಿಸುವ ಕಾರ್ಯ ಮಾರ್ಚ್ ತಿಂಗಳಾಂತ್ಯಕ್ಕೆ ಪೂರ್ಣವಾಗಲಿದೆ. ಈ ಪ್ರಕ್ರಿಯೆ ಪೂರ್ಣವಾದರೆ ಪ್ರತಿ 3 ತಿಂಗಳಿಗೊಮ್ಮೆ ವಾಸ್ತವ ಸ್ಥಿತಿಗತಿ ಅರಿಯಲು ನಿರಂತರ ಬೀಟ್ ವ್ಯವಸ್ಥೆ ಇರಲಿದ್ದು, ಒಂದಿಂಚೂ ಸರ್ಕಾರಿ ಭೂಮಿ ಕಬಳಿಕೆಯಾಗದಂತೆ ತಡೆಯುವ ಪರಿಣಾಮಕಾರಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.