ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಬಿಗ್ ಶಾಕ್, ಪೂರೈಕೆ ಕೊರತೆಯಿಂದಾಗಿ ರಾಜ್ಯದಲ್ಲಿ ಬೇಳೆಕಾಳುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ರಾಜ್ಯದಲ್ಲಿ ತೊಗರಿ ಬೇಳೆ, ಹೆಸರು ಬೇಳೆ ಸೇರಿದಂತೆ ವಿವಿಧ ಬೇಳೆಕಾಳುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ಅನುಭವಿಸುವಂತಾಗಿದೆ. ಕಳೆದ ಜನವರಿಯಲ್ಲಿ ಕೆಜಿಗೆ 95 ರೂ.ಇದ್ದ ತೊಗರಿ ಬೇಳೆ ಇದೀಗ ಕೆಜಿಗೆ 181 ರೂ.ಗೆ ಬಂದು ತಲುಪಿದೆ.
ರಾಜ್ಯದಲ್ಲಿ ಕಳೆದ ವರ್ಷ ಬೇಳೆ ಕಣಜದ ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿ ತೊಗರಿ ಬೇಳೆಗೆ ನೆಟೆರೋಗ, ಪ್ರವಾಹ, ಹವಾಮಾನ ವೈಪರೀತ್ಯದಿಂದ ವಾರ್ಷಿಕ 60 ಲಕ್ಷ ಕ್ವಿಂಟಾಲ್ ಸಂಗ್ರಹವಾಗುತ್ತಿದ್ದ ಬೇಳೆಕಾಳು ಈಗ 35 ಲಕ್ಷ ಕ್ವಿಂಟಾಲ್ ಗೆ ಕುಸಿದಿದೆ.
ಯಾವ ಬೇಳೆಕಾಳು ಎಷ್ಟು ಏರಿಕೆ?
ತೊಗರಿಬೇಳೆ ಕೆಜಿಗೆ 172 ರೂ.
ಕಡಲೇಬೇಳೆ 90 ರೂ.
ಹೆಸರುಬೇಳೆ 122 ರೂ.
ಕಡಲೆಕಾಳು 85 ರೂ.
ಹೆಸರು ಕಾಳು 155 ರೂ.ವರೆಗೆ ಏರಿಕೆಯಾಗಿದೆ.