ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಭೀಕರ ಬರದ ನಡುವೆ ರಾಜ್ಯದಲ್ಲಿ ಆಹಾರ ಧಾನ್ಯಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಬೆಳೆಗಳಿಗೆ ಸಂಕಷ್ಟ ಎದುರಾಗಿದದು, ದಿನದಿಂದ ದಿನಕ್ಕೆ ಆಹಾರ ಧಾನ್ಯಗಳ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ಅಕ್ಕಿ, ಬೇಳೆ ತೊಗರಿ, ಹೆಸರು, ಉದ್ದು, ಕಡಲೆ, ಗೋಧಿ ಸೇರಿದಂತೆ ಹಲವು ಧಾನ್ಯಗಳ ಬೆಲೆಯಲ್ಲಿ ಶೇ. 30 ರಷ್ಟು ಏರಿಕೆಯಾಗಿದೆ.
ಎರಡು ತಿಂಗಳ ಹಿಂದೆ 130 ರೂ. ಇದ್ದ ಕೆಜಿ ತೊಗರಿಬೇಳೆ ಸಗಟು ದರದಲ್ಲಿ 160-170 ರೂ. ಇದ್ರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 200 ರೂ.ಗೆ ಮಾರಾಟವಾಗುತ್ತಿದೆ. ಅಕ್ಕಿ ಬೆಲೆ 25 ಕೆಜಿ ಮೂಟೆಗೆ 1200-1300 ರೂ. ಇದ್ದದ್ದು, 1600 ರೂ.ಗೆ ತಲುಪಿದೆ. ಹೆಸರು ಕಾಳು ದರ ಕೆಜಿಗೆ 30-40 ರೂ.ವರೆಗೆ ಏರಿಕೆಯಾಗಿದೆ. ಈಗ ಕೆಜಿಗೆ 160 ರೂ.ವರೆಗೆ ಮಾರಾಟವಾಗುತ್ತಿದೆ. ಅಕ್ಕಿ, ಗೋಧಿ ಹಾಗೂ ಬೇಳೆಕಾಳುಗಳ ದರ ತಲಾ ಶೇ. 25-30 ರಷ್ಟು ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.