
ಬೆಂಗಳೂರು : ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ಮತ್ತೊಂದು ಶಾಕ್, ತೊಗರಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಹೌದು, ಕಳೆದ ವರ್ಷ ಪ್ರವಾಹದಿಂದ ಇಳುವರಿ ಕಡಿಮೆಯಾಗಿರುವುದರಿಂದ ತೊಗರಿ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆಮಟ್ಟಕ್ಕೆ ಏರಿಕೆಯಾಗಿದೆ. ಈ ಮೂಲಕ ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಶಾಕ್ ನೀಡಿದೆ.ಕಲಬುರಗಿಯ ಎಪಿಎಂಸಿಯಲ್ಲಿ ತೊಗರಿ ಕ್ವಿಂಟಾಲ್ ಗೆ ಗರಿಷ್ಠ 12,140 ರೂ. ದರ ತಲುಪಿದೆ. ಈ ತಿಂಗಳ ಆರಂಭದಲ್ಲೇ 10 ಸಾವಿರ ಇದ್ದ ತೊಗರಿ ದರ ದಿಢೀರ್ 12 ಸಾವಿರ ರೂ. ಗಡಿ ದಾಟಿದ್ದು, ಇನ್ನೂ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಬೇಳೆ ಬೆಲೆಯಲ್ಲೂ ಹೆಚ್ಚಾಗಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ ಕೆಜಿ ಬೇಳೆ ಬೆಲೆ 120 ರೂ. ಇದ್ದರೆ, ಈಗ 165 ರೂ.ಗಳಿಗೆ ಏರಿಕೆಯಾಗಿದೆ. ಈ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತಷ್ಟು ಹೈರಾಣಾಗುವಂತೆ ಮಾಡಿದೆ.