ಬೆಂಗಳೂರು : 60 ವರ್ಷ ಮೀರಿದ ಬಿಸಿಯೂಟ ಅಡುಗೆ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, 60 ವರ್ಷ ಪೂರ್ಣಗೊಳಿಸಿದವರನ್ನು ಕಡ್ಡಾಯವಾಗಿ ಅಡುಗೆ ಕರ್ತವ್ಯದಿಂದ ತೆಗೆದು ಹೊಸದಾಗಿ ನೇಮಕ ಮಾಡಿಕೊಳ್ಳುವಂತೆ ಅದೇಶ ಹೊರಡಿಸಲಾಗಿದೆ.
ಪಿಎಂಪೋಷಣ್ (ಮಧ್ಯಾಹ್ನ ಉಪಹಾರ ಯೋಜನೆಯ) ಅಡಿ ಅಡುಗೆ ಸಿಬ್ಬಂದಿಯ ನೇಮಕಾತಿ ಮಾಡಿಕೊಡಲು ಅನುಮತಿಯನ್ನು ನೀಡಲಾಗಿದ್ದು, ಒಂದು ವೇಳೆ ಅಡುಗೆ ಸಿಬ್ಬಂದಿಗೆ 60 ವರ್ಷ ವಯೋಮಿತಿ ಮೀರಿದ್ದಲ್ಲಿ ಅವರ ಸ್ಥಳಕ್ಕೆ ಹೊಸದಾಗಿ ಅಡುಗೆ ಸಿಬ್ಬಂದಿಯನ್ನು ನಿಯಮಾನುಸಾರ ಆಯ್ಕೆ ಮಾಡಿಕೊಳ್ಳಲು ತಿಳಿಸಿದೆ.
ದಿನಾಂಕ:11.10.2023 ರಂದು ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಯಂತೆ ಅಡುಗೆ ಸಿಬ್ಬಂದಿಯನ್ನು ಪ್ರತಿ ವರ್ಷ ಮಾರ್ಚ್ 31 ಕ್ಕೆ ಅಡುಗೆ ಕೆಲಸದಿಂದ ಕೈಬಿಟ್ಟು, ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಹಿಂದಿನ ವರ್ಷದಲ್ಲಿ ಅಡುಗೆ ಕೆಲಸ ನಿರ್ವಹಿಸಿದ್ದ ಸಿಬ್ಬಂದಿಯನ್ನೇ (60 ವರ್ಷ ವಯೋಮಿತಿ ಮೀರಿಲ್ಲದಿದ್ದಲ್ಲಿ ಹಾಗೂ ಯಾವುದೇ ದೂರುಗಳು ಇಲ್ಲದಿದ್ದಲ್ಲಿ ಮಾತ್ರ) ಅಡುಗೆ ಕೆಲಸಕ್ಕೆ ತೆಗೆದುಕೊಳ್ಳಲು ಸೂಚಿಸಿದೆ.