ಬೆಂಗಳೂರು : ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದ ಮಹಿಳೆಯರಿಗೆ ಆಹಾರ ಇಲಾಖೆ ಬಿಗ್ ಶಾಕ್ ನೀಡಿದ್ದು, ಸುಮಾರು 93 ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ತಿರಸ್ಕೃತಗೊಂಡಿವೆ.
ಎಪಿಎಲ್ ಕಾರ್ಡ್ದಾರರ ಬಹುತೇಕ ಅರ್ಜಿಗಳು ತಿರಸ್ಕೃತಗೊಂಡಿವೆ. ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ತಿದ್ದುಪಡಿಗೆ ಎಪಿಎಲ್ ಕಾರ್ಡ್ದಾರರು ಮುಂದಾಗಿದ್ದರು.ಅರ್ಜಿ ಹಾಕಿದವರಲ್ಲಿ ಶೇ.70ರಷ್ಟು ಎಪಿಎಲ್ ಕಾರ್ಡ್ದಾರರಿದ್ದಾರೆ. ರಾಜ್ಯದಲ್ಲಿ ಒಟ್ಟು 24 ಲಕ್ಷ ಎಪಿಎಲ್ ಕಾರ್ಡ್ ದಾರರಿದ್ದಾರೆ.
ಒಂದು ತಿಂಗಳಲ್ಲಿ ಹೊಸ ತಿದ್ದುಪಡಿಗೆ 53,219 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕಾರ್ಡ್ ತಿದ್ದುಪಡಿಗೆ ಒಟ್ಟು 3.70 ಲಕ್ಷ ಅರ್ಜಿಗಳ ಸಲ್ಲಿಕೆಯಾಗಿವೆ. ಈ ಪೈಕಿ 1.17 ಲಕ್ಷ ಕಾರ್ಡ್ ತಿದ್ದುಪಡಿ ಮಾಡಲಾಗಿದೆ. 3.70 ಲಕ್ಷ ಅರ್ಜಿಗಳ ಪೈಕಿ 93,362 ಬಿಪಿಎಲ್ ಕಾರ್ಡ್ ತಿರಸ್ಕೃತಗೊಂಡಿವೆ.
ಹೆಸರು ಬದಲಾವಣೆ, ಸೇರ್ಪಡೆಗೆ ಮಾತ್ರ ಅವಕಾಶವಿತ್ತು. 1.17 ಲಕ್ಷ ಕಾರ್ಡ್ ಗಳ ತಿದ್ದುಪಡಿಗೆ ಮಾತ್ರ ಸಮ್ಮತಿಸಲಾಗಿದೆ. 93,362 ಕಾರ್ಡ್ ತಿರಸ್ಕೃತಗೊಂಡಿವೆ ಎಂದು ಹೇಳಲಾಗಿದೆ.