ಬೆಂಗಳೂರು : ನೈಸ್ ರೋಡಲ್ಲಿ ಸಂಚರಿಸುವ ವಾಹನ ಮಾಲೀಕರಿಗೆ ಬಿಗ್ ಶಾಕ್ ಎದುರಾಗಿದ್ದು, ಟೋಲ್ ದರ ಭಾರಿ ಹೆಚ್ಚಳವಾಗಿದೆ.
ಜುಲೈ 1ರಿಂದ NICE ರೋಡ್ ಟೋಲ್ ದರ ಕೂಡ ಏರಿಕೆಯಾಗಿದ್ದು, ಟೋಲ್ ದರ ಏರಿಕೆ ಬೆನ್ನಲ್ಲೇ ಮಾದಾವರ ಮಾರ್ಗದ BMTC ಬಸ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ.ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆವರೆಗಿನ 9 ಕಿ.ಮೀ ಉದ್ದದ ಟೋಲ್ ದರ 50 ರಿಂದ 60 ರೂಗೆ ಏರಿಕೆಯಾಗಿದೆ.ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆವರೆಗೆ ಪರಿಷ್ಕೃತ ಟೋಲ್ 45 ರೂಪಾಯಿಂದ 50ಕ್ಕೆ ಹೆಚ್ಚಳವಾಗಿದೆ.
ಬಿಎಂಟಿಸಿ ಬಸ್ಗಳಿಗೆ NICE ರಸ್ತೆಯಲ್ಲಿ ಟೋಲ್ ಹಾಕದಂತೆ ಸಾರಿಗೆ ಇಲಾಖೆ ಮನವಿ ಮಾಡಿದೆ ಎನ್ನಲಾಗಿದ್ದು, ಸಾರಿಗೆ ಇಲಾಖೆ ಈ ಮಾರ್ಗದ ಟಿಕೆಟ್ ದರ ಹೆಚ್ಚಳ ಮಾಡುತ್ತಾ ಇಲ್ಲವಾ ಕಾದು ನೋಡಬೇಕಾಗಿದೆ.