![](https://kannadadunia.com/wp-content/uploads/2020/11/Private-Bus-3.jpg)
ಬೆಂಗಳೂರು: ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಖಾಸಗಿ ಬಸ್ ಮಾಲೀಕರು ಬಿಗ್ ಶಾಕ್ ನೀಡಿದ್ದಾರೆ. ಖಾಸಗಿ ಬಸ್ ಟಿಕೆಟ್ ದರವನ್ನು ಎರಡು ಪಟ್ಟು ಹೆಚ್ಚಳ ಮಾಡಲಾಗಿದೆ.
ಸಂಕ್ರಾಂತಿ ಹಬ್ಬಕ್ಕೆ ಮುಂಚಿತವಾಗಿ ಖಾಸಗಿ ಬಸ್ ಮಾಲೀಕರು ಬಸ್ ದರವನ್ನು ಏರಿಸಿದ್ದಾರೆ. ವಿಮಾನ ಇದರಿಂದಾಗಿ ಖಾಸಗಿ ಎಸಿ ಬಸ್ ಪ್ರಯಾಣವು ಪ್ರಯಾಣಕ್ಕಿಂತಲೂ ದುಬಾರಿಯಾಗಿದೆ. ಖಾಸಗಿ ಬಸ್ ಮಾಲೀಕರು ಪ್ರತಿ ಬಾರಿಯಂತೆ ಈ ಬಾರಿಯೂ ಬಸ್ ಟಿಕೆಟ್ ದರವನ್ನು ದುಪ್ಪಟ್ಟು ಮಾಡಿದ್ದಾರೆ.
ಈ ವರ್ಷದ ಮೊದಲ ಹಬ್ಬ ಸಂಕ್ರಾತಿಗೆ ಸುಲಿಗೆಗೆ ಇಳಿದ ಖಾಸಗಿ ಬಸ್ ಗಳು ಜನವರಿ 13 ಎರಡನೇ ಶನಿವಾರ, 14 ಭಾನುವಾರ ಹೀಗಾಗಿ ಸಾಲು ಸಾಲು ರಜೆ ಹಿನ್ನೆಲೆ ಊರಿಗೆ ತೆರಳಲು ಟಿಕೆಟ್ ಬುಕ್ಕಿಂಗ್ ಮಾಡಲು ಹೋದವರಿಗೆ ಟಿಕೆಟ್ ದರ ಏರಿಕೆಯ ಶಾಕ್ ಎದುರಾಗಿದೆ.
ಬೆಂಗಳೂರು- ಹುಬ್ಬಳಿ 600- 1000 ರೂ. ಇದ್ದದ್ದು, 1700-2500 ರೂ.ವರೆಗೆ ಏರಿಕೆ ಮಾಡಲಾಗಿದೆ.
ಬೆಂಗಳೂರು-ಶಿವಮೊಗ್ಗ ನಡುವಿನ ದರ 450-600 ರೂ. ಇದ್ದದ್ದು 1200-1600 ರೂ.ವರೆಗೆ ಏರಿಕೆ ಮಾಡಿದ್ದಾರೆ.
ಬೆಂಗಳೂರು-ಮಂಗಳೂರು 1300-1700 ರೂ.
ಬೆಂಗಳೂರು-ಕಲಬುರುಗಿ 1600-2200 ರೂ.
ಬೆಂಗಳೂರು-ಮಡಿಕೇರಿ- 1150-1600 ರೂ.ವರೆಗೆ ಏರಿಕೆ ಮಾಡಲಾಗಿದೆ.