ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಶಾಕ್ ಕಾದಿದೆ. ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೋರಟವರು 3 ಪಟ್ಟು ಹೆಚ್ಚು ಹಣ ಕೊಟ್ಟು ಬಸ್ ಪ್ರಯಾಣ ಮಾಡಬೇಕಿದೆ.
ಹೌದು, ಶಕ್ತಿ ಯೋಜನೆ ಪರಿಣಾಮ ಖಾಸಗಿ ಬಸ್ ಗಳು ಏಕಾಏಕಿ ಬಸ್ ಟಿಕೆಟ್ ಗಳ ದರವನ್ನು 3 ಪಟ್ಟು ಹೆಚ್ಚಳ ಮಾಡಲು ಮುಂದಾಗಿದ್ದು, ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರು ದುಬಾರಿ ಬೆಲೆಯ ಟಿಕೆಟ್ ಖರೀದಿಸಿ ಪ್ರಯಾಣಿಸುವ ಆತಂಕ ಶುರುವಾಗಿದೆ.
700 ರೂಪಾಯಿ ಇದ್ದ ಬಸ್ ನ ಸಾಮಾನ್ಯ ದರ ಇದೀಗ ರೂ.2,500 ರಿಂದ ರೂ. 3000ಕ್ಕೆ ಏರಿಕೆಯಾಗಿದೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಖಾಸಗಿ ಬಸ್ ದರ ಏರಿಕೆ ಮಾಡಿದ್ದರೂ ಇಲಾಖೆಯೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.