ರಾಜ್ಯದಲ್ಲಿ ಇನ್ನೂ ಕೂಡ ಮಳೆಗಾಲ ಮುಗಿದಿಲ್ಲ, ಆದರೆ ಈಗಾಗಲೇ ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿಗೆ ಸರ್ಕಾರ ನಿರ್ಧರಿಸಿದೆ. ಹೌದು, ರಾಜ್ಯಾದ್ಯಂತ ಅನಧಿಕೃತ ಲೋಡ್ ಶೆಡ್ಡಿಂಗ್ ಮಾಡಲು ಸರ್ಕಾರ ನಿರ್ಧರಿಸಿದೆ.
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಸಿದಿರುವ ಹಿನ್ನೆಲೆಯಲ್ಲಿ ಕಳೆದ 5 ದಿನಗಳಿಂದ ಅಘೋಷಿತ ಲೋಡ್ಶೆಡ್ಡಿಂಗ್ ಜಾರಿಯಾಗಿದೆ. ಪರಿಣಾಮ ಆ.8ರಿಂದ ರಾಜ್ಯಾದ್ಯಂತ ಐದೂ ಎಸ್ಕಾಂಗಳು ಅನಿವಾರ್ಯವಾಗಿ ಅನಿಯಮಿತ ವಿದ್ಯುತ್ ಕಡಿತದ ಮೊರೆ ಹೋಗಿವೆ. ಆಗಸ್ಟ್ 8 ರಿಂದ ಆಗಸ್ಟ್ 11 ರವರೆಗೆ ವಿದ್ಯುತ್ ಕೊರತೆ ಕಾರಣ ನೀಡಿ ನಿರ್ದಿಷ್ಟ ಸಮಯಗಳಲ್ಲಿ ಇಂತಿಷ್ಟು ಕಡಿಮೆ ವಿದ್ಯುತ್ ಡ್ರಾ ಮಾಡಬೇಕು ಎಂದು ಎಸ್ಕಾಂಗಳಿಗೆ ಸೂಚನೆ ನೀಡಲಾಗಿದೆ.
ಆ.8 ರಂದು 3,500 ಮೆ.ವ್ಯಾಟ್, ಆ.9ರಂದು 2,800 ಮೆ. ವ್ಯಾಟ್, ಆ.10 ರಂದು 4,750 ಮೆ.ವ್ಯಾಟ್, ಆ.11 ರಂದು 3,200 ಮೆ.ವ್ಯಾಟ್ ನಷ್ಟು ವಿದ್ಯುತ್ ಕಡಿಮೆ ಡ್ರಾ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಅನಧಿಕೃತ ಲೋಡ್ ಶೆಡ್ಡಿಂಗ್ ಗೆ ವಿದ್ಯುತ್ ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆ ಯಾಗಿದ್ದೇ ಕಾರಣ ಎಂದು ಕೆಪಿಟಿಸಿಎಲ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.