ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕುಟುಂಬದವರು ಅಕ್ರಮವಾಗಿ ಮಾರಕಾಸ್ತ್ರ ಸಂಗ್ರಹಿಸಿದ್ದು, ದಾಳಿ ಮಾಡಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಮನೆಯಲ್ಲಿ ಸಂಗ್ರಹಿಸಲಾಗಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದು, ದಾಳಿಯ ವೇಳೆ ಒಬ್ಬ ಪರಾರಿಯಾಗಿದ್ದು ಐವರನ್ನು ಬಂಧಿಸಲಾಗಿದೆ. ಮಳವಳ್ಳಿಯ ಪವಿತ್ರರಾಜು ಅವರು ತಮ್ಮ ಮನೆಯನ್ನು ತಸ್ಲೀ ಎಂಬುವರಿಗೆ ಬಾಡಿಗೆ ನೀಡಿದ್ದರು.
ಮುಸ್ಲಿಂ ಕುಟುಂಬದವರು ವಾಸವಾಗಿರುವ ಬಾಡಿಗೆ ಮನೆಯಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿವೆ ಎಂದು ಅಕ್ಕಪಕ್ಕದ ನಿವಾಸಿಗಳು ಪವಿತ್ರರಾಜು ಅವರಿಗೆ ತಿಳಿಸಿದ್ದು, ಇದರಿಂದ ಮನೆ ಖಾಲಿ ಮಾಡುವಂತೆ ಪವಿತ್ರರಾಜು ಮುಸ್ಲಿಂ ಕುಟುಂಬದವರಿಗೆ ಹೇಳಿದ್ದಾರೆ. ಅಲ್ಲದೇ, ಅವರು ಮನೆ ಒಳಗೆ ಪ್ರವೇಶಿಸಿದಾಗ ಮಾರಕಾಸ್ತ್ರಗಳು ಸುರಂಗದಂತಹ ಹಳ್ಳ ಕೂಡ ಇರುವುದು ಕಂಡುಬಂದಿದೆ. ಆತಂಕಗೊಂಡ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ದಾಳಿ ಮಾಡಿ ಐವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆನ್ನಲಾಗಿದೆ.