ಬೆಂಗಳೂರು : ಮದ್ಯ ಪ್ರಿಯರಿಗೆ ಮತ್ತೆ ಬಿಗ್ ಶಾಕ್ ಎದುರಾಗಿದ್ದು, ಶೀಘ್ರವೇ ಬಿಯರ್ ದರ 8 ರಿಂದ 10 ರೂ. ಹೆಚ್ಚಳವಾಗಲಿದೆ.
ಹೌದು, ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇಕಡ 10 ರಷ್ಟು ಹೆಚ್ಚಿಸಲು ಅಬಕಾರಿ ಇಲಾಖೆ ಮುಂದಾಗಿದೆ. 650 ಮಿಲೀ ಅಳತೆಯ ಪ್ರತಿ ಬಾಟಲಿ ಬಿಯರ್ ದರದಲ್ಲಿ 8 ರಿಂದ 10 ರೂ ಹೆಚ್ಚಳವಾಗಲಿದೆ. ದರ ಹೆಚ್ಚಳ ಮಾಡಲು ಕರ್ನಾಟಕ ಅಬಕಾರಿ ಇಲಾಖೆಗಳು ಸಿದ್ದತೆ ನಡೆಸಿದೆ.
2023 ರ ಜುಲೈ ತಿಂಗಳಲ್ಲಿ ಭಾರತೀಯ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ 20 ರಷ್ಟು ಮತ್ತು ಬಿಯರ್ ಮೇಲಿನ ಹೆಚ್ಚುವರಿ ತೆರಿಗೆಯನ್ನು ಶೇ 10 ರಷ್ಟು ಹೆಚ್ಚಳ ಮಾಡಲಾಗಿತ್ತು, ಇದೀಗ ಮತ್ತೆ ದರ ಏರಿಸಲು ಸಿದ್ದತೆ ನಡೆಸಿದ್ದು, ಮದ್ಯ ಪ್ರಿಯರಿಗೆ ಜೇಬಿಗೆ ಮತ್ತೆ ಕತ್ತರಿ ಬೀಳಲಿದೆ.