ಬೆಂಗಳೂರು : ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಬಿಗ್ ಶಾಕ್ ನೀಡಿದ್ದು, ಮಕ್ಕಳಿಗೆ 2 ನೇ ಜೊತೆ ಸಮವಸ್ತ್ರದ ಬಟ್ಟೆಯನ್ನು ಮಾತ್ರ ನೀಡಲಿದ್ದು, ಬಟ್ಟೆಯನ್ನು ಹೊಲಿಸುವ ವೆಚ್ಚವನ್ನು ಪೋಷಕರೇ ಭರಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯ 45,45,749 ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆಯುವ ಸಿದ್ದ ಸಮವಸ್ತ್ರವನ್ನು ಮಾತ್ರ ನೀಡಲು ಮುಂದಾಗಿದ್ದು, ಪೋಷಕರಿಗೆ ಸಮವಸ್ತ್ರದ ಬಟ್ಟೆಯನ್ನು ಹೊಲಿಸಿಕೊಳ್ಳುವ ಬೆಚ್ಚ ಭರಿಸಬೇಕಾಗಿದೆ.
ಈಗಾಗಲೇ ಮಕ್ಕಳಿಗೆ ಒಂದು ಜೊತೆ ಸಿದ್ದಪಡಿಸಿದ ಸಮವಸ್ತ್ರ ವಿತರಿಸಿರುವ ಶಿಕ್ಷಣ ಇಲಾಖೆ 2 ನೇ ಜೊತೆ ಸಮವಸ್ತ್ರವನ್ನು ನೀಡುತ್ತಿದೆ. ಸಮವಸ್ತ್ರ ಸರಬರಾಜಿಗೆ ಟೆಂಡರ್ ಪಡೆದಿದ್ದ ಮಹಾರಾಷ್ಟ್ರ ಮೂಲದ ಕಂಪನಿಯಿಂದ ಈಗ ಸರಬರಾಜು ಪ್ರಕ್ರಿಯೆ ಆರಂಭಿಸಿದ್ದು, ಬಟ್ಟೆಯನ್ನು ಮಾತ್ರ ಕಂಪನಿ ಸರಬರಾಜು ಮಾಡಲಿದೆ. ಹೊಲಿಕೆಯ ವೆಚ್ಚ ಅಂದಾಜು 600-700 ರೂ.ಗಳನ್ನು ಪೋಷಕರೇ ಭರಿಸಬೇಕು ಎಂದು ಇಲಾಖೆ ತಿಳಿಸಿದೆ.