ಬೆಂಗಳೂರು : ರಾಜ್ಯದ ‘SSLC’ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, ಇನ್ಮುಂದೆ ಮುಖ್ಯ ಪರೀಕ್ಷೆಯಂತೆ ಮಧ್ಯವಾರ್ಷಿಕ ಪರೀಕ್ಷೆ ಕೂಡ ನಡೆಯಲಿದೆಯಂತೆ.
ಹೌದು. ಎಸ್ಎಸ್ಎಲ್ಸಿ ಮಧ್ಯವಾರ್ಷಿಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಿ ಕಳುಹಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ. ಈ ಹಿಂದೆ ಪೂರ್ವ ಸಿದ್ಧತಾ ಮತ್ತ ವಾರ್ಷಿಕ ಪರೀಕ್ಷೆಗಳಿಗೆ ಮಾತ್ರ ಮಂಡಳಿ ಪ್ರಶ್ನಿ ಪತ್ರಿಕೆ ಸಿದ್ದಪಡಿಸಿ ಕಳುಹಿಸುತ್ತಿತ್ತಯ. ಆದ್ರೆ, ಈ ವರ್ಷದಿಂದ ಮಧ್ಯವಾರ್ಷಿಕ ಪರೀಕ್ಷೆಗೂ ಪ್ರಶ್ನಿ ಪತ್ರಿಕೆ ರೂಪಿಸಿ ಆನ್ಲೈನ್ ಮೂಲಕ ಕಳುಹಿಸಲು ಮಂಡಳಿ ನಿರ್ಧರಿಸಿದೆ.
ಮಧ್ಯವಾರ್ಷಿಕ ಪರೀಕ್ಷೆಗೆ ಕೆಲವೇ ದಿನಗಳು ಇರುವಾಗ ಮಂಡಳಿ ನಿರ್ಧಾರ ಕೈಗೊಂಡಿದ್ದು, ಪೋಷಕರು, ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಗೂ, ಪ್ರಶ್ನೆ ಪತ್ರಿಕೆ ಮುದ್ರಣಕ್ಕೆ ಯಾವುದೇ ಅನುದಾನವನ್ನೂ ಶಾಲೆಗಳಿಗೆ ಬಿಡುಗಡೆ ಮಾಡಲಾಗಿಲ್ಲ. ಶಿಕ್ಷಕರು ಹಾಗೂ ಶಾಲೆಗಳ ಹೆಗಲಿಗೆ ಖರ್ಚು ಹಾಕಿ ಇಲಾಖೆ ಸುಮ್ಮನಾಗಿದೆ. ಇದರಿಂದಾಗಿ ಶಿಕ್ಷಕರು ದಾನಿಗಳ ಮೊರೆ ಹೋಗಬೇಕಾದ ಸ್ಥಿತಿ ಸರ್ಕಾರಿ ಶಾಲೆ ಶಿಕ್ಷಕರಿಗೆ ಬಂದಿದೆ. ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳಿಗೆ ಅನುದಾನ ಬಿಡುಗದೇ ಮಾಡದೇ ಧಿಡೀರ್ ಆಗಿ ಶಿಕ್ಷಣ ಇಲಾಖೆ ಈ ನಿರ್ಧಾರ ಕೈಗೊಂಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.