ಬೆಂಗಳೂರು : ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್ ಎದುರಾಗಿದ್ದು, ಖಾಸಗಿ ಬಸ್ ಗಳು ಟಿಕೆಟ್ ದರವನ್ನು ಹೆಚ್ಚಳ ಮಾಡಿದೆ.
ಹಬ್ಬದ ಸೀಸನ್ ಬಂದರೆ ಸಾಕು ಖಾಸಗಿ ಬಸ್ ಗಳು ಪ್ರಯಾಣಿಕರಿಂದ ಮನಸೋ ಇಚ್ಚೆ ವಸೂಲಿ ಮಾಡಲು ಶುರು ಮಾಡುತ್ತವೆ. ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ರಜೆಯಿದೆ ಅಂತ ಊರಿಗೆ ಹೊರಟವರಿಗೆ ಖಾಸಗಿ ಬಸ್ ಕಡೆ ದರ ಏರಿಕೆ ಶಾಕ್ ಎದುರಾಗಿದೆ.
ಬೆಂಗಳೂರು-ಶಿವಮೊಗ್ಗ ಸಾಮಾನ್ಯ ದಿನಗಳಲ್ಲಿ ದರ 450-₹600 ಇತ್ತು, ಇದೀಗ 1200- 1600 ರೂವರೆಗೆ ಏರಿಸಿದೆ. ಬೆಂಗಳೂರು- ಹುಬ್ಬಳ್ಳಿ ಸಾಮಾನ್ಯ ದಿನಗಳಲ್ಲಿ ದರ 600 ರಿಂದ 1000 ರೂ ಇದ್ದು, ಈಗ 1700-ರಿಂದ 2500 ರೂವರೆಗೂ ಏರಿಸಲಾಗಿದೆ. ಬೆಂಗಳೂರು-ಮಡಿಕೇರಿ 600 ರಿಂದ 1500 ರೂವರೆಗೆ ಏರಿಸಲಾಗಿದೆ. ಬೆಂಗಳೂರು-ಬೆಳಗಾವಿ 800 ರೂ ಇದ್ದ ಟಿಕೆಟ್ ದರ ಇದೀಗ 1500 ರೂವರೆಗೆ ಏರಿಸಲಾಗಿದೆ. ಹೌದು, ಹೊಸ ವರ್ಷದ ಮೊದಲ ಹಬ್ಬಕ್ಕೆ ರಜೆಯಿದೆ ಅಂತ ಊರಿಗೆ ಹೊರಟವರಿಗೆ ಖಾಸಗಿ ಬಸ್ ದರ ಬಿಗ್ ಶಾಕ್ ನೀಡಿದೆ.