ಬೆಂಗಳೂರು : ನಾನ್ ವೆಜ್ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಈರುಳ್ಳಿ ಬೆಲೆ ಹೆಚ್ಚಳದ ಬೆನ್ನಲ್ಲೇ ಕುರಿ, ಕೋಳಿ ಮಾಂಸದ ಬೆಲೆಯೂ ಹೆಚ್ಚಳವಾಗುತ್ತಿದೆ.
ಕೋಳಿಗೆ ನೀಡುವ ಆಹಾರದ ಬೆಲೆಯಲ್ಲಿ ಏರಿಕೆ ಕಂಡಿರುವ ಹಿನ್ನೆಲೆ ಚಿಕನ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಬಾಯ್ಲರ್ ಕೋಳಿ 170 ರೂಗೆ ಮಾರಾಟ, ಫಾರಂ ಕೋಳಿ 180 ರೂಗೆ , ನಾಟಿ ಕೋಳಿ 350, ಜವಾರಿ ನಾಟಿ ಕೋಳಿ 550 ರೂಗೆ ಮಾರಾಟವಾಗುತ್ತಿದೆ. ಕುರಿ ಮಾಂಸದಲ್ಲೂ ಕೆಜಿಗೆ 800-900 ರೂಗಳಿಗೆ ಹೆಚ್ಚಳವಾಗುತ್ತಿದೆ ಎನ್ನಲಾಗಿದೆ.
ಈರುಳ್ಳಿ ಬೆಲೆ ಏರಿಕೆ
ಟೊಮೆಟೊ ನಂತರ ಈರುಳ್ಳಿ ಬೆಲೆ ಭಾರಿ ಏರಿಕೆಯಾಗಿದ್ದು, ವಾರದಲ್ಲಿ ಸುಮಾರು 60 ಪ್ರತಿಶತದಷ್ಟು ಏರಿಕೆಯಾಗಿದೆ. ಕಳೆದ ವಾರ ಕೆಜಿಗೆ 25-30 ರೂ ಇದ್ದ ಈರುಳ್ಳಿ ದರ ಈಗ ಪ್ರಮುಖ ನಗರಗಳಲ್ಲಿ ಕೆಜಿಗೆ 40-45 ರೂ.ಗೆ ಮಾರಾಟವಾಗುತ್ತಿದೆ.ದೊಡ್ಡ ಚಿಲ್ಲರೆ ಅಂಗಡಿಗಳಲ್ಲಿ ಈಗಾಗಲೇ ಕೆಜಿಗೆ 50 ರೂ.ಗೆ ತಲುಪಿದೆ. ದೆಹಲಿಯಲ್ಲಿ ತರಕಾರಿ ಮಾರಾಟಗಾರರು ಈರುಳ್ಳಿಯನ್ನು ಕೆಜಿಗೆ 45 ರೂ.ಗೆ ಮಾರಾಟ ಮಾಡುತ್ತಿದ್ದಾರೆ.
ಗ್ರಾಹಕ ವ್ಯವಹಾರಗಳ ಇಲಾಖೆಯ ಬೆಲೆ ನಿಗಾ ವಿಭಾಗದ ಪ್ರಕಾರ, ಉತ್ತರ ಭಾರತದಲ್ಲಿ ಈರುಳ್ಳಿಯ ಸಗಟು ಬೆಲೆ ಈ ತಿಂಗಳು ಕ್ವಿಂಟಲ್ಗೆ 1,000 ರೂ.ಗಿಂತಲೂ ಹೆಚ್ಚಾಗಿದೆ.ಆಗಸ್ಟ್ 2 ರಂದು ಕ್ವಿಂಟಲ್ಗೆ 1,651 ರೂ.ನಿಂದ ಆಗಸ್ಟ್ 14 ರಂದು 2,400 ರೂ.ಗೆ, ದೇಶದ ಅತಿದೊಡ್ಡ ಸಗಟು ಮಾರುಕಟ್ಟೆಯಾದ ನಾಸಿಕ್ನಲ್ಲಿ ಈರುಳ್ಳಿಯ ಸಗಟು ಬೆಲೆ ಶೇಕಡ 45 ರಷ್ಟು ಜಿಗಿದಿದೆ.