ಬೆಂಗಳೂರು : ಹೊಸ ವಾಹನ ಖರೀದಿದಾರರಿಗೆ ಬಿಗ್ ಶಾಕ್ ಎದುರಾಗಿದ್ದು, ರಾಜ್ಯದಲ್ಲಿ ಏಪ್ರಿಲ್ ತಿಂಗಳಿನಿಂದ ಆಟೋ, ಕಾರು. ಬೈಕ್ ದರ ಏರಿಕೆಯಾಗಲಿದೆ.
ಏಪ್ರಿಲ್ ತಿಂಗಳಿನಿಂದ ಹೊಸ ವಾಹನಗಳ ಬೆಲೆ ಪ್ರತಿ ವಾಹನದ ಮೇಲೆ ಶೇ.4 ರಷ್ಟು ಏರಿಕೆಯಾಗಲಿದೆ.
ಬೈಕ್ 2 %, ಕಾರಿನ ಮೇಲೆ 4 % ರಷ್ಟು ದರ ಏರಿಕೆಯಾಗಲಿದೆ. ಎಲ್ಲಾ ವಾಹನ ತಯಾರಿಕಾ ಕಂಪನಿಗಳು ದರ ಏರಿಕೆ ಮಾಡಲು ನಿರ್ಧರಿಸಿದೆ. 1 ಲಕ್ಷ ರೂ ಬೆಲೆಯ ಬೈಕ್ ಖರೀದಿ ಮಾಡಿದರೆ 2 ಸಾವಿರದಿಂದ 3000 ರೂ ಹೆಚ್ಚಳವಾಗಲಿದೆ. ಹಾಗೂ 5 ಲಕ್ಷ ಬೆಲೆ ಇರುವ ಹೊಸ ಕಾರಿನ ಬೆಲೆ 15,000-20,000 ವರೆಗೆ ಏರಿಕೆ ಆಗಲಿದೆ.
ಹೊಸ ಕಾರು, ಬೈಕ್ ಕೊಂಡುಕೊಳ್ಳಬೇಕು ಎಂದು ಅಂದುಕೊಂಡಿರುವ ಮಿಡಲ್ ಕ್ಲಾಸ್ ಜನರ ಜೇಬಿಗೆ ಕತ್ತರಿ ಬೀಳಲಿದೆ.ಈಗಾಗಲೇ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಬಸ್ ಟಿಕೆಟ್, ಮೆಟ್ರೋ, ಎಲ್ಲವೂ ದುಬಾರಿ ಆಗಿದೆ.