ಬೆಂಗಳೂರು : ಬಸ್ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಪ್ರಯಾಣಿಕರಿಗೆ ‘ನಮ್ಮ ಮೆಟ್ರೋ’ ಬಿಗ್ ಶಾಕ್ ನೀಡಲಿದೆ.
ಹೌದು, ನಮ್ಮ ಮೆಟ್ರೋ ಟಿಕೆಟ್ ದರ ಶೀಘ್ರವೇ 15-20 % ಹೆಚ್ಚಳವಾಗಲಿದ್ದು, ಸಿಲಿಕಾನ್ ಸಿಟಿಯ ಮಂದಿಯ ಜೇಬಿಗೆ ಕತ್ತರಿ ಬೀಳಲಿದೆ.
ಟಿಕೆಟದ ದರ ಹೆಚ್ಚಿಸಲು ಬಿಎಂಆರ್ ಸಿಲ್ ಸಿದ್ದತೆ ನಡೆಸಿದ್ದು, ಶೇ.15 ರಿಂದ 20 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಜನವರಿ 17 ಕ್ಕೆ ದರ ಪರಿಷ್ಕರಣೆ ಸಮಿತಿ ಸಲ್ಲಿಸಲಿರುವ ಅಂತಿಮ ವರದಿ ಕುರಿತು ಸಮಾಲೋಚನೆ ನಡೆಯಲಿದೆ. ಜ.17 ರ ಸಭೆಯಲ್ಲಿ ಟಿಕೆಟ್ ದರ ಫೈನಲ್ ಆಗಲಿದೆ.
2017 ರಲ್ಲಿ ನಮ್ಮ ಮೆಟ್ರೋ ಟಿಕೆಟ್ ದರ ಶೇ.10-15 ರಷ್ಟು ಏರಿಕೆ ಮಾಡಲಾಗಿತ್ತು. ಇದೀಗ ಶೇ.15 ರಿಂದ 20 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಬೆಂಗಳೂರಿಗರ ಜೀವನಾಡಿಯಾಗಿರುವ ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ ಸಾವಿರಾರು ಜನ ಸಂಚಾರ ಮಾಡುತ್ತಾರೆ. ಕಾರ್ಯಾಚರಣೆ ವೆಚ್ಚ ಅಧಿಕವಾದ ಹಿನ್ನೆಲೆ ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾಪ ಮಾಡಲಾಗಿದೆ.