ಬೆಂಗಳೂರು : ಹೊಸ ವರ್ಷಕ್ಕೆ ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ ಎದುರಾಗಲಿದ್ದು, ಜನವರಿಯಿಂದ ಎಣ್ಣೆ ಬೆಲೆ ಭಾರಿ ಏರಿಕೆಯಾಗಲಿದೆ. ಹಾಗಂತ ಸರ್ಕಾರ ಮತ್ತೆ ಸದ್ದಿಲ್ಲದೇ ಎಣ್ಣೆ ರೇಟು ಜಾಸ್ತಿ ಮಾಡುತ್ತಿದೆ ಎಂದು ಅಂದುಕೊಳ್ಳಬೇಡಿ. ಈ ಬಾರಿ ಮದ್ಯದ ಬೆಲೆ ಹೆಚ್ಚಳ ಮಾಡುತ್ತಿರುವುದು ಮದ್ಯದ ಕಂಪನಿಗಳು.
ಹೌದು, ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಜೊತೆಗೆ ‘ಮದ್ಯ’ ಕೂಡ ಕೈ ಸುಡಲಿದೆ.ಹೌದು, ಮದ್ಯಪ್ರಿಯರಿಗೆ ಮತ್ತೊಮ್ಮೆ ದರ ಏರಿಕೆಯ ಬಿಸಿ ತಟ್ಟಲಿದ್ದು, ಮದ್ಯದ ಕಂಪನಿಗಳೇ ಬೆಲೆ ಏರಿಕೆಯ ಕಿಕ್ ಕೊಡಲಿದೆ. ಕಳೆದ ಬಜೆಟ್ನಲ್ಲಿ ಸರ್ಕಾರ ಮದ್ಯದ ಮೇಲಿನ ತೆರಿಗೆಯನ್ನು ಕೆಲವಕ್ಕೆ ಶೇಕಡಾ 10 ಇನ್ನು ಕೆಲವಕ್ಕೆ ಶೇ. 20ರಷ್ಟು ಏರಿಕೆ ಮಾಡಿತ್ತು. ಹಾಗಾಗಿ ಜುಲೈ ಒಂದರಿಂದ ಮದ್ಯದ ದರ ಏರಿಕೆ ಜಾರಿಗೆ ಬಂದಿತ್ತು. ಅಬಕಾರಿ ಇಲಾಖೆಗೆ ಪತ್ರ ಬರೆದಿರುವ ಕಂಪನಿಗಳು ದರ ಏರಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದೆ.
ಓಟಿ, ಬಿಪಿ, 8 ಪಿಎಂ ದರ ಹೆಚ್ಚಳ ಮಾಡುತ್ತೇವೆ ಎಂದು ಅಬಕಾರಿ ಇಲಾಖೆಗೆ ಪತ್ರದಲ್ಲಿ ಹೇಳಲಾಗಿದೆ. ಪ್ರತಿ ಕ್ವಾಟರ್ ಮೇಲೆ 20-30 ರೂಪಾಯಿ ಹೆಚ್ಚಳ ಮಾಡುವುದಾಗಿ ಪತ್ರದಲ್ಲಿ ತಿಳಿಸಿದೆ.
ಎಷ್ಟಾಗಲಿದೆ ಎಣ್ಣೆ ರೇಟು..?
ಓಟಿ 180 ಎಂಎಲ್ ನ ಈಗಿನ ದರ 100 ರೂ.ಜನವರಿ 1ರಿಂದ 123 ರೂ. ಆಗಲಿದೆ
ಬಿಪಿ 180 ಎಂಎಲ್ ನ ಈಗಿನ ದರ 123 ರೂ. ಜನವರಿಯಿಂದ 159 ರೂ. . ಆಗಲಿದೆ
8PM (180 ಎಂಎಲ್) ನ ಈಗಿನ ದರ 100 ರೂ. ಜನವರಿಯಿಂದ 123 ರೂ. ಆಗಲಿದೆ
ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಣೆ ವೆಚ್ಚಗಳು ಹೆಚ್ಚಾಗಿರುವ ಕಾರಣ ದರ ಏರಿಕೆ ಅಗತ್ಯವಾಗಿದ್ದು, ಮದ್ಯದ ಕಂಪನಿಗಳು ಬೆಲೆ ಏರಿಕೆ ಮಾಡಲು ನಿರ್ಧರಿಸಿದೆ.ಕರ್ನಾಟಕದಲ್ಲಿ ‘ಮದ್ಯ’ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿದೆ., ಬಿಯರ್ ಜೊತೆಗೆ ಇತರೆ ಮಾದರಿಯ ಮದ್ಯ ಮಾರಾಟದ ಪ್ರಮಾಣ 0.43 ಶೇ. ಹೆಚ್ಚಳವಾಗಿದ್ದು, ಗ್ಯಾರಂಟಿ ಯೋಜನೆಗಳನ್ನು ನೀಡಿ ಬೇರೆ ಯೋಜನೆಗಳಿಗೆ ಹಣ ನೀಡಲು ಕಷ್ಟಪಡುತ್ತಿದ್ದ ಸರ್ಕಾರಕ್ಕೆ ಮದ್ಯ ಪ್ರಿಯರು ಬೂಸ್ಟ್ ನೀಡಿದ್ದಾರೆ.