ಜೀವವಿಮೆ ಪಾಲಿಸಿದಾರರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. 5 ಲಕ್ಷಕ್ಕಿಂತ ಹೆಚ್ಚಿರುವ ಜೀವ ವಿಮಾ ಪಾಲಿಸಿಗಳಿಂದ ಸಿಗುವ ಆದಾಯಕ್ಕೆ ತೆರಿಗೆ ವಿಧಿಸುವ ತೀರ್ಮಾನ ಕೈಗೊಂಡಿದ್ದ ಆದಾಯ ತೆರಿಗೆ ಇಲಾಖೆ ಇದನ್ನು ಈಗ ಅಂತಿಮಗೊಳಿಸಿದೆ.
ಜೀವ ವಿಮೆ ಪ್ರೀಮಿಯಂ ಮೊತ್ತ 5 ಲಕ್ಷ ರೂಪಾಯಿಗಳಿಗಿಂತ ಅಧಿಕವಾಗಿದ್ದಲ್ಲಿ ಹಾಗೂ ಈ ಪಾಲಿಸಿ 2023ರ ಏಪ್ರಿಲ್ 1 ರ ನಂತರ ಪಡೆದುಕೊಂಡಿದ್ದ ವೇಳೆ ಈ ವಿಮೆಯ ಅವಧಿ ಪೂರ್ಣಗೊಂಡ ನಂತರ ಸಿಗುವ ಮೊತ್ತಕ್ಕೆ ತೆರಿಗೆ ಅನ್ವಯವಾಗಲಿದ್ದು, ಕೇಂದ್ರ ನೇರ ತೆರಿಗೆಗಳ ಮಂಡಳಿಯು ಈ ಕುರಿತು ಅಧಿಸೂಚನೆ ಹೊರಡಿಸಿದೆ.
ವಾರ್ಷಿಕ ಪ್ರೀಮಿಯಂ ಮೊತ್ತ 5 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದ್ದಲ್ಲಿ ಇಂತಹ ಪಾಲಿಸಿಗಳ ಅವಧಿ ಪೂರ್ಣಗೊಂಡ ನಂತರ ಸಿಗುವ ಮೊತ್ತಕ್ಕೆ ತೆರಿಗೆ ವಿನಾಯಿತಿ ಇರಲಿದ್ದು, ಹಾಗೆಯೇ ಪಾಲಿಸಿ ಹೊಂದಿರುವ ವ್ಯಕ್ತಿ ಮರಣ ನಂತರದಲ್ಲಿ ಸಿಗುವ ಮೊತ್ತಕ್ಕೂ ತೆರಿಗೆ ವಿನಾಯಿತಿ ಮುಂದುವರೆಯಲಿದೆ.