ದೈತ್ಯ ‘ಫ್ಲಿಪ್ ಕಾರ್ಟ್’ ಕಂಪನಿ ತನ್ನ ಉದ್ಯೋಗಿಗಳಿಗೆ ಬಿಗ್ ಶಾಕ್ ನೀಡಿದ್ದು, ಶೇ. 5-7ರಷ್ಟು ನೌಕರರ ವಜಾಗೆ ಕಂಪನಿ ಸಜ್ಜಾಗಿದೆ ಎಂದು ಹೇಳಲಾಗಿದೆ.
ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ತನ್ನ ಒಟ್ಟು ತಂಡದ ಗಾತ್ರವನ್ನು ಶೇಕಡಾ 5-7 ರಷ್ಟು ಕಡಿಮೆ ಮಾಡುವ ಉದ್ದೇಶದಿಂದ ಕಾರ್ಯಕ್ಷಮತೆ ಆಧಾರಿಸಿ ನೌಕರರನ್ನು ವಜಾ ಮಾಡಲು ಸಿದ್ದತೆ ನಡೆಸಿದೆ. ಈ ವರ್ಷದ ಮಾರ್ಚ್-ಏಪ್ರಿಲ್ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಕಳೆದ ಒಂದು ವರ್ಷದಿಂದ ಹೊಸ ನೇಮಕಾತಿಗಳನ್ನು ಸ್ಥಗಿತಗೊಳಿಸಿರುವ ಫ್ಲಿಪ್ ಕಾರ್ಟ್ ಅನಗತ್ಯ ವೆಚ್ಚ ನಿಯಂತ್ರಣಕ್ಕೆ ಬ್ರೇಕ್ ಹಾಕಲು ಮುಂದಾಗಿದೆ, ಕಂಪನಿಯು ಕಳೆದ ಎರಡು ವರ್ಷಗಳಿಂದ ವಾರ್ಷಿಕ, ಕಾರ್ಯಕ್ಷಮತೆ ಚಾಲಿತ ಉದ್ಯೋಗ ಕಡಿತವನ್ನು ಜಾರಿಗೆ ತರುತ್ತಿದೆ.