ಗದಗ : ಭೀಕರ ಬರಗಾಲಕ್ಕೆ ಕಂಗಾಲಾಗಿರುವ ರೈತರಿಗೆ ಗದಗ ಜಿಲ್ಲಾಡಳಿತ ಬಿಗ್ ಶಾಕ್ ಕೊಟ್ಟಿದ್ದು, ಫಸಲ್ ಬೀಮಾ ಯೋಜನೆಯಡಿ ಬೆಳೆ ವಿಮೆ ಹಣ ರೈತರ ಖಾತೆಗೆ ಜಮಾ ಆಗಿಲ್ಲ.
ಹೌದು, ಸರ್ಕಾರವು ಗದಗ ಜಿಲ್ಲೆಗೆ ರಾಜ್ಯದಲ್ಲೇ ಅತಿ ಹೆಚ್ಚು 35 ಕೋಟಿ ರೂ. ಬಿಡುಗಡೆ ಮಾಡಿದೆ. ಸರ್ಕಾರಿದಂದ ಹಣ ಬಿಡುಗಡೆ ಆದ್ರೂ ರೈತರಿಗೆ ಬೆಳೆ ವಿಮೆ ಹಣವನ್ನು ಗದಗ ಜಿಲ್ಲಾಡಳಿತ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಫಸಲ್ ಬೀಮಾ ಯೋಜನೆಯಡಿ ಸರ್ಕಾರ ಗದಗ ಜಿಲ್ಲೆಯೊಂದಕ್ಕೆ 35 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಈ ವರೆಗೆ ರೈತರಿಗೆ ಒಂದೂ ತಿಂಗಳಾದ್ರೂ ಕೂಡ ಹಣ ಬಿಡುಗಡೆ ಮಾಡಿಲ್ಲ. ಬರದಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಜಿಲ್ಲಾಡಳಿತ ಹಣ ನೀಡದೇ ಸತಾಯಿಸುತ್ತಿದೆ. ಜಿಲ್ಲಾಡಳಿತದ ಕ್ರಮಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.