ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಟೊಮ್ಯಾಟೊ ಬೆಲೆ ಏರಿಕೆ ಬಿಸಿ ಮುಟ್ಟಿದ್ದು, ಟೊಮ್ಯೊಟೊ ಬೆಲೆ ಇದೀಗ 250 ರೂ. ಗಡಿ ದಾಟಿ ಇತಿಹಾಸ ನಿರ್ಮಿಸಿದೆ.
ಹೌದು, ಉತ್ತರಾಖಂಡದಲ್ಲಿ ಕೆಜಿ ಟೊಮ್ಯಾಟೊ ಬೆಲೆ 250 ರೂ. ಗಡಿ ದಾಟಿದ್ದು, ಬೆಲೆ ಏರಿಕೆಯಿಂದಾಗಿ ಗ್ರಾಹಕರು ಕಂಗಾಲಾಗಿದ್ದಾರೆ. ಉತ್ತರಾಖಂಡದ ಗಂಗೋತ್ರಿ ಮತ್ತು ಯಮನೋತ್ರಿಯಲ್ಲಿ ಕೆಜಿ ಟೊಮ್ಯಾಟೊ ಬೆಲೆ 200-250 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಭಾರೀ ಮಳೆಯ ಪರಿಣಾಮ ಟೊಮ್ಯಾಟೊ ಬೆಳೆಗಳು ನಾಶವಾಗಿದ್ದು, ಇದರಿಂದ ಟೊಮ್ಯಾಟೊ ಬೇಡಿಕೆಯಷ್ಟು ಪೂರೈಕೆ ಆಗುತ್ತಿಲ್ಲ. ಪರಿಣಾಮ ಟೊಮ್ಯಾಟೊ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ದಿನದಿಂದ ದಿನಕ್ಕೆ ಟೊಮ್ಯಾಟೊ ಬೆಲೆ ಏರಿಕೆಯಿಂದ ಬಿಗ್ ಶಾಕ್ ಎದುರಾಗಿದೆ.