ಬರ, ಬಿಸಿಲು, ನೀರಿನ ಕೊರತೆ, ಮೊದಲಾದ ಕಾರಣಗಳಿಂದ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಬಡ, ಮಧ್ಯಮ ವರ್ಗದವರು ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಮಾಂಸದ ಬೆಲೆ ಕೂಡ ಏರಿಕೆಯಾಗಿದೆ.
ಕೋಳಿ ಮಾಂಸದ ದರ ಈಗ 260 ರೂ. ದಾಟಿದೆ. ವಿತೌಟ್ ಸ್ಕಿನ್ 320 ರೂಪಾಯಿವರೆಗೆ ಏರಿಕೆ ಕಂಡಿದೆ. ಬೋನ್ ಲೆಸ್ ಚಿಕನ್ ದರ ಕೂಡ ಹೆಚ್ಚಾಗಿದ್ದು, ನಾಟಿ ಕೋಳಿ ದರ ಕೇಜಿಗೆ 600 ರಿಂದ 700 ರೂ. ವರೆಗೆ ಇದೆ. ಕುರಿ ಮಾಂಸದ ದರ ಕೆಜಿಗೆ 700 ರೂ.ಗೆತಲುಪಿದ್ದು, ಕುರಿ ಮಟನ್ ಕೆಜಿಗೆ 800 ರೂ. ವರೆಗೆ ಮಾರಾಟವಾಗುತ್ತಿದೆ. ಮೊಟ್ಟೆ 7 ರಿಂದ 8 ರೂ ವರೆಗೆ ಮಾರಾಟವಾಗುತ್ತಿದೆ. ಮದುವೆ ಸೀಸನ್ ಇರುವುದರಿಂದ ಮಾಂಸಕ್ಕೆ ಭಾರಿ ಬೇಡಿಕೆ ಇರುವುದರಿಂದ ಮಾಂಸದ ಬೆಲೆ ಹೆಚ್ಚಳವಾಗುತ್ತಿದೆ ಎನ್ನಲಾಗಿದೆ. ಬೆಲೆ ಏರಿಕೆಯಿಂದ ಗ್ರಾಹಕರು ಆತಂಕಕೀಡಾಗಿದ್ದು , ಇನ್ನೂ ಒಂದು ತಿಂಗಳು ಕಾಲ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.