alex Certify BIG NEWS : ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ : ಈ ಕೋರ್ಸ್’ಗಳ ಶುಲ್ಕ ಏರಿಕೆ ಇಲ್ಲ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ : ಈ ಕೋರ್ಸ್’ಗಳ ಶುಲ್ಕ ಏರಿಕೆ ಇಲ್ಲ..!

ಬೆಂಗಳೂರು : ರಾಜ್ಯದ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಎಂಬಿಎ, ಎಂಸಿಎ, ಎಂಇ ಮತ್ತು ಎಂಟೆಕ್ ಕೋರ್ಸ್ ಗಳ ಬೋಧನಾ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ.

2024-25ನೇ ಸಾಲಿನಲ್ಲೂ ಇದೇ ಶುಲ್ಕವೇ ಮುಂದುವರೆಯಲಿದೆ. ಬೋಧನಾ ಶುಲ್ಕದ ಜೊತೆಗೆ ವಿಶ್ವವಿದ್ಯಾಲಯನಿಗದಿತಶುಲ್ಕವನ್ನು ಸಹಪಾವತಿಸಬೇಕು ಎಂದಿದೆ.

ಸರ್ಕಾರಿ ವಿವಿ, ಕಾಲೇಜು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಈ 20 ಸಾವಿರವಾರ್ಷಿಕ ಬೋಧನಾಶುಲ್ಕವನ್ನು ಕಳೆದ ವರ್ಷವಿಧಿಸಲಾಗಿತ್ತು. ಅನುದಾನ ರಹಿತ ಸಂಸ್ಥೆಗಳಲ್ಲಿ ಎಂಬಿಎ, ಎಂಸಿಎಗೆ 57,750 ರು. ಮತ್ತು ಎಂಇ, ಎಂ.ಟೆಕ್ಕೋರ್ಸ್ಗಳಿಗೆ69,300 ರು. ಶುಲ್ಕನಿಗದಿಪಡಿಸಲಾಗಿತ್ತು. 2024-25ನೇ ಸಾಲಿನಲ್ಲೂ ಇದೇ ಶುಲ್ಕವೇ ಮುಂದುವರೆಯಲಿದೆ. ಯಾವುದೇ ಸಂಸ್ಥೆ ಹೆಚ್ಚುವರಿ ಶುಲ್ಕವನ್ನು ಕೇಳಿದರೆ ವಿದ್ಯಾರ್ಥಿ ಅಥವಾ ಪೋಷಕರು ಪ್ರವೇಶ ಮೇಲ್ವಿಚಾರಣಾ ಸಮಿತಿಗೆ ದೂರನ್ನು ನೀಡಬೇಕು ಎಂದು ಇಲಾಖೆ ಸೂಚಿಸಿದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...