alex Certify BIG NEWS: ಡಿಎಲ್, ಆರ್ಸಿ ಪ್ರಮಾಣಪತ್ರದ ಮಾನ್ಯತೆ ಅವಧಿ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡಿಎಲ್, ಆರ್ಸಿ ಪ್ರಮಾಣಪತ್ರದ ಮಾನ್ಯತೆ ಅವಧಿ ವಿಸ್ತರಣೆ

ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ, ಫಿಟ್‌ನೆಸ್ ಪ್ರಮಾಣಪತ್ರ ಸೇರಿದಂತೆ ಇತರ ಮೋಟಾರು ವಾಹನ ದಾಖಲೆಗಳ ಮಾನ್ಯತೆ ಅವಧಿ ಮೀರುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ. ಅದ್ರ  ನವೀಕರಣಕ್ಕೆ ಮತ್ತೊಂದಿಷ್ಟು ದಿನ ಸಿಕ್ಕಿದೆ. ಸರ್ಕಾರ ಮತ್ತೊಮ್ಮೆ ಸಿಂಧುತ್ವವನ್ನು ವಿಸ್ತರಿಸಿದೆ. ಕೊರೊನಾ ಕಾರಣಕ್ಕೆ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ರಸ್ತೆ ಮತ್ತು ಸಾರಿಗೆ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಫೆಬ್ರವರಿ 1, 2020 ರಂದು ಅವಧಿ ಮುಗಿದ ಮತ್ತು ಲಾಕ್‌ಡೌನ್ ನಿರ್ಬಂಧದಿಂದಾಗಿ ನವೀಕರಿಸಲಾಗದ ಈ ದಾಖಲೆಗಳನ್ನು ಈಗ ಸೆಪ್ಟೆಂಬರ್ 30, 2021 ರವರೆಗೆ ಮಾನ್ಯವೆಂದು ಪರಿಗಣಿಸಲಾಗುತ್ತದೆ.

ಸಚಿವಾಲಯವು ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಆದೇಶ ಹೊರಡಿಸಿದೆ. ಕೊರೊನಾ ಹಿನ್ನಲೆಯಲ್ಲಿ ಚಾಲನಾ ಪರವಾನಗಿ, ಆರ್‌ಸಿ ಮತ್ತು ಫಿಟ್‌ನೆಸ್ ಪ್ರಮಾಣಪತ್ರದಂತಹ ದಾಖಲೆಗಳ ಸಿಂಧುತ್ವವನ್ನು ಸರ್ಕಾರ ಹಲವು ಬಾರಿ ವಿಸ್ತರಿಸಿದೆ. ಈ ಮೊದಲು, ಈ ಎಲ್ಲಾ ದಾಖಲೆಗಳು ಜೂನ್ 30, 2021 ರವರೆಗೆ ಮಾನ್ಯವಾಗಿದ್ದವು. ಇದಕ್ಕೂ ಮೊದಲು ರಸ್ತೆ ಮತ್ತು ಸಾರಿಗೆ ಸಚಿವಾಲಯವು ಮಾರ್ಚ್ 30- 2020, ಜೂನ್ 9-2020 ಮತ್ತು ಆಗಸ್ಟ್ 24-2020, ಡಿಸೆಂಬರ್ 27-2020, ಮಾರ್ಚ್ 26 -2021ರಂದು ವಿಸ್ತರಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...