ಕೇಂದ್ರ ಅಬಕಾರಿ ಸುಂಕ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಗಳಿಂದ 2020-21ರ ವಿತ್ತೀಯ ವರ್ಷದಲ್ಲಿ ಸರ್ಕಾರಕ್ಕೆ 3.4 ಲಕ್ಷ ಕೋಟಿ ರೂಪಾಯಿಗಳು ಬಂದು ಸೇರಿದೆ ಎಂದ ಪೆಟ್ರೋಲಿಯಂ ಸಚಿವ ಹರ್ದೀಪ್ ಪುರಿ, ಇದರಲ್ಲಿ ಹೆಚ್ಚಿನಂಶವು ದೇಶವಾಸಿಗಳಿಗೆ ಉಚಿತ ಕೋವಿಡ್ ಲಸಿಕೆ ಹಾಗೂ ಬಡವರಿಗೆ ನೆರವು ನೀಡಲು ಖರ್ಚಾಗಿದೆ ಎಂದಿದ್ದಾರೆ.
“2020-21ರ ವಿತ್ತೀಯ ವರ್ಷದಲ್ಲಿ ಪೆಟ್ರೋಲ್ ಮೇಲಿನ ಸೆಸ್‌ನಿಂದ ಸಂಗ್ರಹಿಸಲಾದ ಅಬಕಾರಿ ಸುಂಕವು 1,01,598 ಕೋಟಿ ರೂಪಾಯಿಗಳಾಗಿದ್ದು, ಡೀಸೆಲ್‌ನಿಂಧ 2,33,296 ಕೋಟಿ ರೂಪಾಯಿಗಳು ಹರಿದು ಬಂದಿವೆ” ಎಂದು ಲೋಕಸಭೆಯಲ್ಲಿ ಲಿಖಿತ ಉತ್ತರವನ್ನು ಸಲ್ಲಿಸಿದ್ದಾರೆ ಸಚಿವರು.
ವಿರೋಧಕ್ಕೆ ಮಣಿದು ವಿವಾದಾತ್ಮಕ ಹೇಳಿಕೆ ಹಿಂಪಡೆದ ಸಿಧು
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಕಾರ್ಯಗಳಿಗೆ ಈ ಆದಾಯವನ್ನು ಉಪಯೋಗಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಪೆಟ್ರೋಲ್‌ನ ಮಾರಾಟದ ದರದ 55%ರಷ್ಟನ್ನು ಕೇಂದ್ರ ಹಾಗೂ ರಾಜ್ಯಗಳ ತೆರಿಗೆಗಳೇ ರಚಿಸಿವೆ. ಕೇಂದ್ರ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 32.9 ರೂಪಾಯಿ ಸುಂಕ ವಿಧಿಸಿದರೆ, ಡೀಸೆಲ್ ಮೇಲೆ 31.8 ರೂಪಾಯಿಯ ಸೆಸ್ ಇದೆ. ಪ್ರತಿಯೊಂದು ರಾಜ್ಯವೂ ಭಿನ್ನ ಮಟ್ಟದ ಸೆಸ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ವಿಧಿಸುತ್ತವೆ.