ನೀಲಿ ಕಂಗಳ ಚೆಲುವೆ, ಮಹಾಕುಂಭಮೇಳದ ಸುಂದರಿ ‘ಮೊನಾಲಿಸಾ’ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಆಕೆಯ ಆಕರ್ಷಕ ಕಣ್ಣುಗಳು , ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಮಹಾಕುಂಭಮೇಳದ ಸುಂದರಿ ಮೊನಾಲಿಸಾಗೆ ಬಾಲಿವುಡ್ ನಿಂದ ಬಿಗ್ ಆಫರ್ ಬಂದಿದೆ. ಈಕೆಗೆ ನಿರ್ದೇಶಕ ಸನೋಜ್ ಮಿಶ್ರಾ ಅವರು ಸಿನಿಮಾವೊಂದರಲ್ಲಿ ನಟಿಸುವಂತೆ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶೀಘ್ರವೇ ಮೊನಾಲಿಸಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
ಮೊನಾಲಿಸಾ ಭೋಂಸ್ಲೆ ಎಂಬ ಹೆಸರಿನ ಹುಡುಗಿ, ಇಂದೋರ್ (ಮಧ್ಯಪ್ರದೇಶ) ನಿಂದ ಪ್ರಯಾಗ್ರಾಜ್ (ಯುಪಿ) ನ ಮಹಾಕುಂಭ ಮೇಳಕ್ಕೆ ತನ್ನ ಕೈಯಿಂದ ತಯಾರಿಸಿದ ಹಾರಗಳನ್ನು (ಮಾಲಾ) ಮಾರಾಟ ಮಾಡಲು ಬಂದಳು, ತನ್ನ ನೈಸರ್ಗಿಕ ಸೌಂದರ್ಯದಿಂದಾಗಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾಳೆ. ಜನರು ಅವಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.ಮಧ್ಯಪ್ರದೇಶದ ಇಂದೋರ್ ನಿಂದ ಪ್ರಯಾಗ್ ರಾಜ್ ಕುಂಭ ಮೇಳಕ್ಕೆ ಬಂದಿರುವ ಮೊನಾಲಿಸಾ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದರು. ಆಕೆಯ ಸೌಂದರ್ಯಕ್ಕೆ ಮರುಳಾದ ಜನರು ಆಕೆಯನ್ನು ಮೋನಾಲಿಸಾ ಎಂದು ಕರೆಯಲು ಶುರು ಮಾಡಿದರು.
ಪ್ರಯಾಗ್’ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ ಸಮಯದಲ್ಲಿ ರಾತ್ರೋರಾತ್ರಿ ಖ್ಯಾತಿಯನ್ನು ಗಳಿಸಿದ ಯುವತಿ ಮೊನಾಲಿಸಾ ಭೋಂಸ್ಲೆ ತನ್ನ ತಂದೆಯ ಒತ್ತಾಯದ ಮೇರೆಗೆ ಮಧ್ಯಪ್ರದೇಶದ ಇಂದೋರ್ನಲ್ಲಿರುವ ತನ್ನ ಮನೆಗೆ ಮರಳಿದ್ದಾರೆ.’ಮೊನಾಲಿಸಾ’ ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ಅವರು ತಮ್ಮ ಮುಗ್ಧ ನಗು ಮತ್ತು ಆಕರ್ಷಕ ನೀಲಿ ಕಣ್ಣುಗಳನ್ನು ಒಳಗೊಂಡ ವೀಡಿಯೊ ವೈರಲ್ ಆದ ನಂತರ ಇಂಟರ್ನೆಟ್ ಸೆನ್ಸೇಷನ್ ಆದರು, 15 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದರು.
A girl in Mahakumbh Mela is stealing the heart of the people😍
The girl whose name is Monalisa Bhonsle, came to Mahakumbh Mela in Prayagraj (UP) from Indore (MP) to sell her handmade garlands (Mala), has become an internet sensation because of her natural beauty. People are… pic.twitter.com/wj5sNaW1da
— Alok Ranjan Singh (@withLoveBharat) January 17, 2025