ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಬಿಡುಗಡೆ ಯಾವಾಗ ಎಂದು ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟ ದರ್ಶನ್ ಗೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗಿದ್ದು, ಬೆಂಗಳೂರಿನ ಸೆಷನ್ಸ್ ಕೋರ್ಟ್ ಸೆ.30 ಇಂದಿಗೆ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ದರ್ಶನ್ ಬಿಡುಗಡೆ ಯಾವಾಗ..?
ನಟ ದರ್ಶನ್ ಆಶ್ವೀಜ-ಕಾರ್ತಿಕ ಮಾಸದ ಮಧ್ಯ ಭಾಗದಲ್ಲಿ ಬಿಡುಗಡೆ ಆಗುತ್ತಾರೆ ಎಂದು ಜ್ಯೋತಿಷಿ ಡಾ.ಲಕ್ಷ್ಮಿಕಾಂತ ಆಚಾರ್ಯ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. 2027ಕ್ಕೆ ಶನಿ ದಶಾಬುಕ್ತಿ ಪ್ರಾರಂಭವಾಗಲಿದ್ದು, ದರ್ಶನ್ ರಾಜಕೀಯ ಜೀವನ ತುಂಬಾ ಚೆನ್ನಾಗಿರಲಿದೆ. ಆಶ್ವೀಜ-ಕಾರ್ತಿಕ ಮಾಸದ ಮಧ್ಯ ಭಾಗದಲ್ಲಿ ದರ್ಶನ್ ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ.
ನಟ ದರ್ಶನ್ ಜೈಲು ಸೇರಿದ ಬಳಿಕ ಹಲವು ಸ್ವಾಮೀಜಿಗಳು, ಜ್ಯೋತಿಷಿಗಳು ಅವರ ಬಗ್ಗೆ ಭವಿಷ್ಯ ನುಡಿದಿದ್ದರು. ಇತ್ತೀಚೆಗೆ ಆರ್ಯವರ್ಧನ್ ಸ್ವಾಮೀಜಿ ಕೂಡ ನಟ ದರ್ಶನ್ ಗೆ ಕೆಲವು ತಿಂಗಳುಗಳ ಬಳಿಕ ರಾಜಯೋಗ ಕೂಡಿ ಬರಲಿದೆ ಎಂದು ಹೇಳಿದ್ದರು.
ನಟ ದರ್ಶನ್ ಬಂಧನದ ಬಗ್ಗೆ ಖ್ಯಾತ ಸ್ವಾಮಿ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಭವಿಷ್ಯ ನುಡಿದಿದ್ದರು.
2023 ನವೆಂಬರ್ ನಿಂದ 2024 ಅಕ್ಟೋಬರ್ ವರೆಗೆ ಅವರ ಕುಜ ಭುಕ್ತಿ ಇದೆ. ಅಕ್ಟೋಬರ್ ನಂತರ ಅವರ ಜೀವನ ಚೇಂಜ್ ಆಗುತ್ತದೆ. ಅಕ್ಟೋಬರ್ 28 ರವರೆಗೆ ಅವರಿಗೆ ಜಾಮೀನು ಸಿಗಲ್ಲ. ಆಮೇಲೆ ಅವರ ಜೀವನ ಬದಲಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. 2011 ರಿಂದ ಗುರುದಶ ಶುರುವಾಗಿದೆ. ಅವರು ಸಾಕಷ್ಟು ಅಪವಾದ ಅನುಭವಿಸಿದ್ದಾರೆ. ಒಂದಲ್ಲಾ ಒಂದು ವಿವಾದಗಳಲ್ಲಿ ಸಿಲುಕುತ್ತಿದ್ದಾರೆ. ಕೆಲವು ದಿನ ಜೈಲಿನಲ್ಲಿ ಕೂಡ ಇದ್ದರು ಎಂದು ಹೇಳಿದ್ದಾರೆ.