alex Certify BIG NEWS : ‘ಮುಡಾ’ ಪ್ರಕರಣದಲ್ಲಿ ನಾವೇ ನಿಜವಾದ ಸಂತ್ರಸ್ಥರು ; ಸಿಎಂ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ‘ಮುಡಾ’ ಪ್ರಕರಣದಲ್ಲಿ ನಾವೇ ನಿಜವಾದ ಸಂತ್ರಸ್ಥರು ; ಸಿಎಂ ಸಿದ್ದರಾಮಯ್ಯ

ಬೆಂಗಳೂರು : ನಮ್ಮ ಕುಟುಂಬದ ಜಮೀನನ್ನು ನಮ್ಮ ಅನುಮತಿ ಇಲ್ಲದೆ ನಿವೇಶನ ಮಾಡಿ ಹಂಚಿದ್ದು ಮುಡಾದವರ ತಪ್ಪು, ಈ ಪ್ರಕರಣದಲ್ಲಿ ನಾವೇ ನಿಜವಾಗಿ ಸಂತ್ರಸ್ಥರು. ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ”ಮುಡಾದವರು ನಮಗೆ ಬದಲಿ ನಿವೇಶನ ನೀಡುವಾಗ ರಾಜ್ಯದಲ್ಲಿ ಬಿಜೆಪಿ ಸರ್ಕರ ಇತ್ತು. ಒಂದು ವೇಳೆ ಮುಡಾದಿಂದ ನಿವೇಶನ ಹಂಚಿಕೆಯಲ್ಲಿ ತಪ್ಪಾಗಿದ್ದರೆ ನಮಗೆ ನೀಡಿರುವ ಜಮೀನನ್ನು ವಾಪಾಸು ಪಡೆದು, ನಿವೇಶನದ ಬದಲು ಪರಿಹಾರವನ್ನೇ ಕೊಡಲಿ. ಇದಕ್ಕೂ ನಮ್ಮ ತಕರಾರಿಲ್ಲ. ನಮ್ಮ ಕುಟುಂಬದ ಜಮೀನನ್ನು ನಮ್ಮ ಅನುಮತಿ ಇಲ್ಲದೆ ನಿವೇಶನ ಮಾಡಿ ಹಂಚಿದ್ದು ಮುಡಾದವರ ತಪ್ಪು. ನಮ್ಮಿಂದ ವಶಪಡಿಕೊಂಡ ಜಮೀನಿಗೆ ಅಷ್ಟೇ ಪ್ರಮಾಣದ ಜಮೀನನ್ನು ಬೇರೆ ಕಡೆ ಕೊಡಬೇಕಾಗಿತ್ತು. ಈ ಪ್ರಕರಣದಲ್ಲಿ ನಾವೇ ನಿಜವಾಗಿ ಸಂತ್ರಸ್ಥರು”.

”ನಮ್ಮ ಕುಟುಂಬದ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡು ನಿವೇಶನ, ರಸ್ತೆ, ಪಾರ್ಕ್ ಮಾಡಿ ಹಂಚಿದವರು ಮುಡಾದವರು, ತಮ್ಮಿಂದ ತಪ್ಪಾಗಿದೆ ಎಂದು ಮುಡಾ ಒಪ್ಪಿಕೊಂಡಿರುವುದಕ್ಕೆ ದಾಖಲೆಗಳಿದೆ. ನಮ್ಮ ಜಮೀನಿಗೆ ಬದಲಿ ಜಮೀನು ನೀಡಿ ಎಂದು ಮನವಿ ಮಾಡಿದ್ದೇವೆಯೇ ವಿನಃ ವಿಜಯನಗರದಲ್ಲೇ ಕೊಡಿ ಎಂದು ಕೇಳಿಲ್ಲ. ಎಲ್ಲಿ ಜಮೀನು ಕೊಡಬೇಕು ಎಂಬ ನಿರ್ಣಯ ಕೈಗೊಂಡವರು ಮುಡಾದವರು. ಇದರಲ್ಲಿ ನಮ್ಮ ತಪ್ಪೇನಿದೆ?” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

”ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಸಣ್ಣ ತಪ್ಪು, ಅವ್ಯವಹಾರ ಮಾಡದೆ ಪ್ರಾಮಾಣಿಕವಾಗಿ ಮುನ್ನಡೆಯುತ್ತಿದ್ದೇನೆ. ಇದರಿಂದ ಹತಾಶಗೊಂಡಿರುವ ವಿಪಕ್ಷಗಳು ನನ್ನ ಕುಟುಂಬದವರು ಕಾನೂನು ಬದ್ಧವಾಗಿ ಜಮೀನು ಖರೀದಿಸಿದ್ದನ್ನು ಅಕ್ರಮ ಎಂದು ಅಪಪ್ರಚಾರ ಮಾಡುತ್ತಿವೆ. ಮುಡಾ ವಿಚಾರದಲ್ಲಿ ಬಿಜೆಪಿ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುತ್ತಿದೆಯೇ ಹೊರತು ಇದರಲ್ಲಿ ಯಾವುದೇ ಹುರುಳಿಲ್ಲ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...