ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಾಳೆ ‘ಅಖಂಡ ಕರ್ನಾಟಕ’ ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಹೋಟೆಲ್ ಅಸೋಸಿಯೇಷನ್ ಮಹತ್ವದ ಸಭೆ ಕರೆದಿದೆ.
ಇಂದು ಬೆಳಗ್ಗೆ 11 ಗಂಟೆಗೆ ಸಭೆ ಕರೆದಿದ್ದು, ಸಭೆಯಲ್ಲಿ ಹೋಟೆಲ್ ಬಂದ್ ಮಾಡಬೇಕಾ..? ಬೇಡ್ವಾ ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತದೆ.ಬೆಂಗಳೂರು ಬಂದ್ ದಿನ ಕೆಲ ಕಡೆ ವ್ಯಾಪಾರ ವಹಿವಾಟು ಸ್ಥಗಿತವಾಗಿತ್ತು. ಬಂದ್ ದಿನ ಜನರು ಬಾರದ ಹಿನ್ನೆಲೆ ವ್ಯಾಪಾರ ಸಂಪೂರ್ಣ ಕುಗ್ಗಿತ್ತು.ಅಲ್ಲದೇ ಕೆಲವು ಹೋಟೆಲ್ ಗಳ ಮೇಲೆ ಪುಂಡರು ದಾಳಿ ನಡೆಸಿ ಹಾನಿ ಮಾಡಿದ್ದರು. . ಈ ಹಿನ್ನೆಲೆ ನಾಳೆ ಬಂದ್ ದಿನ ವ್ಯಾಪಾರ ವಹಿವಾಟು ನಿಲ್ಲಿಸಬೇಕಾ? ಬೇಡ್ವಾ ಎಂಬುದರ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರವಾಗಲಿದೆ.