ಬೆಂಗಳೂರು: ಸಿಎಂ ಕಾರ್ಯಕ್ರಮದ ವೇದಿಕೆ ಮೇಲೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದ ಡಿ.ಕೆ.ಸುರೇಶ್, ರಾಮನಗರ ಜಿಲ್ಲೆಯ ಜನರ ಗೌರವ ಉಳಿಸಬೇಕಾಗಿದ್ದು ನನ್ನ ಜವಾಬ್ದಾರಿ ಹಾಗಾಗಿ ಬಿಜೆಪಿ ಸಚಿವರ ಮಾತನ್ನು ನಿಲ್ಲಿಸಲು ವೇದಿಕೆ ಮೇಲೆ ಪ್ರಯತ್ನಿಸಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ನಾವು ಬಿಜೆಪಿಯವರು, ನಾವು ಮಾಡೋದೇ ಹೀಗೆ, ಎಂದು ಬಾಯಿಗೆ ಬಂದಂತೆ ಮಾತನಾಡಿ ಸವಾಲು ಹಾಕಿದ್ದು ಅದು ನನಗೆ ಹಾಕಿದ ಸವಾಲ್ ಅಲ್ಲ, ರಾಮನಗರದ ಜನರಿಗೆ ಹಾಕಿದ ಸವಾಲು, ಕೆಂಪೇಗೌಡ, ಅಂಬೇಡ್ಕರ್ ಗೆ ಮಾಡಿದ ಅವಮಾನ ಎಂದು ಗುಡುಗಿದ್ದಾರೆ.
BIG NEWS: ಕಾಂಗ್ರೆಸ್ ಗೂಂಡಾಗಳನ್ನು ತಯಾರು ಮಾಡುವ ಫ್ಯಾಕ್ಟರಿ; ಡಿ.ಕೆ. ಸಹೋದರರ ವಿರುದ್ಧ ಕಿಡಿ ಕಾರಿದ BJP
ಸಚಿವ ಅಶ್ವತ್ಥನಾರಾಯಣ ಅವರಿಗೆ ಸ್ವತಃ ಸಿಎಂ ನೀವು ಭಾಷಣ ಮಾಡುತ್ತಿರುವುದು ಸರಿಯಿಲ್ಲ, ಸಾಕು ಎಂದು ಹೇಳಿದರೂ ಸಹ ಕರ್ನಾಟಕದ ಎಲ್ಲಾ ಯುವಕರಿಗೆ ಅವಮಾನ ಮಾಡುವ ಕೆಲಸ ಸಚಿವರು ಮಾಡಿದ್ದಾರೆ. ಅಂತಹ ಮಾತು ಇಲ್ಲಿ ಯಾಕೆ ಬರಬೇಕು? ನಾನು ಪಲಾಯನವಾದಿಯಲ್ಲ, ಬಿಜೆಪಿ ರಾಜ್ಯಾಧ್ಯಕ್ಷರೇ ಸಚಿವರು ಹೀಗೆ ಮಾತನಾಡುವುದು ಸಂಸ್ಕೃತಿಯೇ. ಅಶ್ವತ್ಥನಾರಾಯಣ ತಮ್ಮ ಸ್ಟೈಲ್, ಧಿಮಾಕನ್ನು ಅಶೋಕ್ ಅವರಿಗೆ ತೋರಿಸಿ ಎಂದು ಕಿಡಿಕಾರಿದ್ದಾರೆ.