![](https://kannadadunia.com/wp-content/uploads/2019/05/1558074022-10-RS-Coin.jpg)
ಬೆಂಗಳೂರು : ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ರೂ.10/-ರ ನಾಣ್ಯಗಳನ್ನು ಸ್ವೀಕರಿಸದಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದು, 10 ರೂ. ನಾಣ್ಯಗಳನ್ನು ಸಿಬ್ಬಂದಿಗಳು ಸ್ವೀಕರಿಸುವಂತೆ ಸೂಚನೆ ನೀಡಿದೆ.
ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್. ಆದೇಶ ಹೊರಡಿಸಿದ್ದು, ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ (2)ರ ಪತ್ರವನ್ನು ಇದರೊಂದಿಗೆ ಲಗತ್ತಿಸಿದೆ. ಸದರಿ ಪತ್ರದಲ್ಲಿ ಕೋರಿರುವಂತೆ ರೂ.10/-ರ ನಾಣ್ಯಗಳ ಚಲಾವಣೆಗಾಗಿ ಪ್ರಯಾಣಿಕರಿಂದ ಸ್ವೀಕರಿಸುವ ಕುರಿತು ಸಂಬಂಧಿಸಿದ ಎಲ್ಲಾ ಸಿಬ್ಬಂದಿಗಳಿಗೆ ಮತ್ತೊಮ್ಮೆ ಸೂಕ್ತ ನಿರ್ದೇಶನ ನೀಡಲು ಕ್ರಮವಹಿಸುವಂತೆ ಕೋರಲು ನಿರ್ದೇಶಿಸಲಾಗಿದೆ.
![](https://kannadadunia.com/wp-content/uploads/2024/01/ten-Rupee-coin.jpg)