ಬೆಂಗಳೂರು : ರಾಜ್ಯದ ಎಲ್ಲ ಜಮೀನುಗಳ ಮೂಲ ದಾಖಲೆಗಳ ಡಿಜಿಟಲೀಕರಣ ಕಾರ್ಯವನ್ನು 2024ರ ಕೊನೆಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ ಕೃಷ್ಣ ಬೈರೇಗೌಡ, ಪ್ರಾಯೋಗಿಕವಾಗಿ ಕೆಲವು ಜಿಲ್ಲೆಗಳಲ್ಲಿ ಈ ಕಾರ್ಯ ನಡೆದಿವೆ. ಇನ್ನು ಮುಂದೆ ಅಭಿಯಾನದ ರೂಪದಲ್ಲಿ ಭೂದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗುವುದು. ಜಮೀನಿನ ಮಾಲೀಕತ್ವ ಯಾರದ್ದು? ಯಾರಿಂದ ಯಾರಿಗೆ ಹೇಗೆ ಬಂತು, ಮಾರಾಟವಾಯಿತೆ ಅಥವಾ ದಾನದ ರೂಪದಲ್ಲಿ ಬಂದಿತೆ ಎಂಬುದರ ಸ್ಪಷ್ಟ ಮಾಹಿತಿ ಸಿಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲ ಜಮೀನುಗಳ ಮೂಲ ದಾಖಲೆಗಳ ಡಿಜಿಟಲೀಕರಣ ಕಾರ್ಯವನ್ನು 2024ರ ಕೊನೆಯೊಳಗೆ ಪೂರ್ಣಗೊಳಿಸಲಾಗುವುದು. ಸುಮಾರು 2.40 ಕೋಟಿಯಷ್ಟು ಸರ್ವೆ ಸಂಖ್ಯೆಗಳ ಪಹಣಿಗಳಿವೆ. ಅವುಗಳನ್ನು ರಕ್ಷಿಸಲು ಡಿಜಿಟಲೀಕರಣ ಮಾಡಲಾಗುವುದು ಎಂದು ಹೇಳಿದ್ದಾರೆ.