ಬೆಂಗಳೂರು : ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವಿಧಾನಮಂಡಲದ/ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಈ ಕೂಡಲೇ ಜಾರಿಗೆ ಬರುವಂತೆ ಈ ಕೆಳಕಂಡ ಸದಸ್ಯರುಗಳು ನಾಮನಿರ್ದೇಶನ ಹೊಂದಿರುತ್ತಾರೆಂದು ಈ ಮೂಲಕ ಮಾನ್ಯ ಸದಸ್ಯರುಗಳಿಗೆ ತಿಳಿಯಪಡಿಸಲಾಗಿದೆ. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ 211(2)ರ ಮೇರೆಗೆ, ಮಾನ್ಯ ಸಭಾಧ್ಯಕ್ಷರು ಶ್ರೀ ಸಿ.ಸಿ. ಪಾಟೀಲ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರುತ್ತಾರೆ ಎಂದು ಸುತ್ತೋಲೆ ಹೊರಡಿಸಲಾಗಿದೆ.