![](https://kannadadunia.com/wp-content/uploads/2023/12/cm-siddaramaiah-cm.jpg)
ಬೆಳಗಾವಿ : ಬೆಳಗಾವಿ ಚಳಿಗಾಲದ ಅಧಿವೇಶನದ ವಿಧಾನಸಭಾ ಕಲಾಪದಲ್ಲಿ ಬುಧವಾರ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2023-24ನೇ ಸಾಲಿನ ಮೊದಲನೇ ಪೂರಕ ಅಂದಾಜುಗಳ ವೆಚ್ಚ ರೂ.3542.10 ಕೋಟಿಗಳಿಗೆ ಅಂಗೀಕಾರ ದೊರಕಿದೆ.
ಸದನದ ಅಂಗೀಕಾರ ಕೋರಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಹಿಂದೆ ಜುಲೈನಲ್ಲಿ ರೂ.3,41,321 ಕೋಟಿಗಳ ಆಯವ್ಯಯ ಮಂಡಿಸಲಾಗಿತ್ತು. ಆಯವ್ಯಯದಲ್ಲಿ ಘೋಷಿಸಿದ ಹೊರತಾಗಿ ಸರ್ಕಾರದ ಕೆಲವು ಖರ್ಚುಗಳಿಗೆ ರಾಜ್ಯದ ತುರ್ತ ನಿಧಿಯಡಿ ಅನುದಾನವನ್ನು ಒದಗಿಸಲಾಗಿದೆ. ಹೀಗೆ ವೆಚ್ಚ ಮಾಡಿದ ಮೊಬಲಗನ್ನು ತೋರಿಸುವ ಪೂರಕ ಅಂದಾಜು ವಿವರಣೆಯನ್ನು ರಾಜ್ಯದ ಸದನದಲ್ಲಿ ಇಟ್ಟು ಒಪ್ಪಿಗೆ ಪಡೆದುಕೊಳ್ಳಬೇಕು. ಇದಕ್ಕೆ ಸಂವಿಧಾನದ 205(1)(ಎ) ಅನುಚ್ಛೇದ ಅವಕಾಶ ಕಲ್ಪಿಸಿದೆ. ಈಗ ಮಂಡಿಸಿದ ಪೂರಕ ಅಂದಾಜಿನ ಗಾತ್ರ 2023-24ರ ಆಯವ್ಯಯದ ಶೇ.1 ರಷ್ಟು ಮಾತ್ರ ಎಂದರು.
ಮೊದಲನೇ ಪೂರಕ ಅಂದಾಜಿನಲ್ಲಿ ಒದಗಿಸಿರುವ ಒಟ್ಟು ಮೊತ್ತ ರೂ.3542.10 ಕೋಟಿಯಲ್ಲಿ ರೂ.17.66 ಕೋಟಿ ಪ್ರಭೃತ ವೆಚ್ಚ ಮತ್ತು ರೂ.3524.44 ಕೋಟಿ ಪುರಸ್ಕೃತ ವೆಚ್ಚಗಳು ಸೇರಿವೆ. ಇದರಲ್ಲಿ ರೂ.326.98 ಕೋಟಿ ರಿಸರ್ವ ಫಂಡ್ ಠೇವಣಿ ಹಾಗೂ ಎಸ್.ಎನ್.ಎ ಖಾತೆಗಳಿಂದ ಭರಿಸಲಾಗುವುದು. ರೂ.684.28 ಕೋಟಿ ಕೇಂದ್ರ ಸರ್ಕಾರ ಸಹಾಯಕ್ಕೆ ಸಂಬAಧಿಸಿವೆ ಎಂದರು.
ಪೂರಕ ಅಂದಾಜಿನಲ್ಲಿ ರೂ.915 ಕೋಟಿ ಬಂಡವಾಳ ವೆಚ್ಚವಾಗಿ ಅಭಿವೃದ್ಧಿ ಕಾರ್ಯಗಳಿಗೆ ವ್ಯಯಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆಯ ಎಸ್.ಇ.ಪಿ ಹಾಗೂ ಟಿ.ಎಸ್.ಪಿ ಯೋಜನಗೆ ರೂ.508 ಕೋಟಿ, ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರಕ್ಕೆ ರೂ.502 ಕೋಟಿ, ಸಮಗ್ರ ಶಿಶು ಅಭಿವೃದ್ದಿ ಯೋಜನೆಗೆ ರೂ.310 ಕೋಟಿ, ರಾಷ್ಟಿçÃಯ ಆಹಾರ ಭದ್ರತಾ ಯೋಜನೆಯ ಸಾಗಣಿಕೆ ವೆಚ್ಚಗಳಿಗೆ ರೂ.297 ಕೋಟಿ, ಎಸ್.ಸಿ.ಡಿ.ಎಸ್‌ಗೆ ರೂ.284 ಕೋಟಿ, ಉಗ್ರಾಣ ನಿಗಮಕ್ಕೆ ಸಾಲವಾಗಿ ರೂ.229 ಕೋಟಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲು ರೂ.189 ಕೋಟಿ, ನಬಾರ್ಡ ರಸ್ತೆಗಳಿಗೆ ರೂ.150 ಕೋಟಿ, ಕೇಂದ್ರದ ಹದಿಹರಿಯದ ಗ್ರಂಥಾಲಯ ಇ ಲೈಬ್ರರಿಗೆ ಯೋಜನೆಗೆ ರಾಜ್ಯದ ಪಾಲಾಗಿ ರೂ.132 ಕೋಟಿ, ಕೃಷಿ ಭಾಗ್ಯ ಯೋಜನೆಗೆ ರೂ.100 ಸೇರಿದಂತೆ ತೋಟಗಾರಿಕೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಕಂದಾಯ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ವಾಣಿಜ್ಯ ಮತ್ತು ಕೈಗಾರಿಕೆ, ನಗರಾಭಿವೃದ್ಧಿ ಮತ್ತು ವಸತಿ, ಲೋಕೋಪಯೋಗಿ, ನೀರಾವರಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಆರ್ಥಿಕ ಇಲಾಖೆಗಳಿಗೆ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ರೂ.39,000 ಕೋಟಿಗಳ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ನಡುವೆಯು ಆರ್ಥಿಕ ಶಿಸ್ತು ಕಾಪಾಡಿಕೊಂಡು ಬರಲಾಗಿದೆ. ಹಿಂದಿನ ಸರ್ಕಾರಗಳು ಸಹ ಪೂರಕ ಅಂದಾಜು ಮಂಡಿಸಿವೆ. ಸದನವು 2023-24ನೇ ಸಾಲಿನ ಪೂರಕ ಅಂದಾಜಿಗೆ ಅಂಗೀಕಾರ ನೀಡುವಂತೆ ಕೋರಿದರು. ಪೂರಕ ಅಂದಾಜಿನ ಧನವಿಯೋಗಕ್ಕೆ ಅನುವಾಗುವಂತೆ 2023ನೇ ಸಾಲಿನ ಕರ್ನಾಟಕ ಧನವಿನಯೋಗ ಸಂಖ್ಯೆ-4 ವಿಧೇಯಕವನ್ನು ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದರು.
ಚರ್ಚೆಯ ನಂತರ ಸದನದಲ್ಲಿ ಪೂರಕ ಅಂದಾಜು ಹಾಗೂ ಧನವಿನಯೋಗ ವಿಧೇಯಕಕ್ಕೆ ಅನುಮೋದನೆ ನೀಡಿ ಅಂಗೀಕರಿಸಲಾಯಿತು. ಈವುಗಳು ಇದೇ ಅಧಿವೇಶನದಲ್ಲಿ ವಿಧಾನ ಪರಿಷತ್ ಅಂಗೀಕಾರಕ್ಕಾಗಿ ಚರ್ಚೆಗೆ ಬರಲಿವೆ.