ಬೆಂಗಳೂರು : ರಾಜ್ಯದಲ್ಲಿ ಈ ವಾರ ಬಿಸಿಲಿನ ಝಳ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಈ ಬಾರಿ ಹಿಂದೆಂದೂ ಕಂಡರಿಯದಂತಹ ಸುಡು ಬಿಸಿಲು ಜನಸಾಮಾನ್ಯರನ್ನು ಕಂಗೆಡಿಸಿದೆ. 10 ಗಂಟೆಯ ಬಳಿಕ ಹೊರಗೆ ಹೋಗಲೂ ಸಹ ಹಿಂದೇಟು ಹಾಕುವಂತಾಗಿದ್ದು, ತಾಪಮಾನದಿಂದ ಜನರು ಹೈರಾಣಾಗಿದ್ದಾರೆ. ಫೆಬ್ರವರಿಯಲ್ಲೇ ಕೆಲವು ಜಿಲ್ಲೆಗಳಲ್ಲಿ 30-35 ಡಿಗ್ರೀ ಸೆ.ತಾಪಮಾನ ದಾಖಲಾಗುತ್ತಿದೆ.
ಬಾಗಲಕೋಟೆ , ಬೆಳಗಾವಿ, ಬೀದರ್. ಧಾರವಾಡ, ಗದಗ, ಹಾವೇರಿ, ರಾಯಚೂರು, ವಿಜಯಪುರ, ಹಾವೇರಿ. ಕೊಪ್ಪಳ, ಯಾದಗಿರಿಯಲ್ಲಿ ಭಾರಿ ಹವಾಮಾನ ಬದಲಾವಣೆಯಾಗಲಿದೆ.
ಹಾಗೆಯೇ ದಕ್ಷಿಣ ಕನ್ನಡ, ಉಡುಪಿ. ಬಳ್ಳಾರಿ. ಬೆಂಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಮಗಳೂರು. ದಾವಣಗೆರೆ, ಹಾಸನ, ಕೊಡಗು, ಕೋಲಾರ. ಮಂಡ್ಯ. ಮೈಸೂರು, ಶಿವಮೊಗ್ಗದಲ್ಲಿ ಕೂಡ ಬಿಸಿಲಿನ ಝಳ ಹೆಚ್ಚಾಗಲಿದೆ.