ಬೆಂಗಳೂರು: ಎಸ್ ಟಿ ಬಿ ಟಿ ಪ್ರದೇಶದ ಮನೆಯೊಂದರ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿರುವ ಘಟನೆ ಕಲಬುರ್ಗಿಯಲಿ ನಡೆದಿದೆ.
ಮಹಾರಾಷ್ಟ್ರದಿಂದ ಕಲಬುರ್ಗಿಗೆ ಬಂದು ಹಲವರು ಭ್ರೂಣಲಿಂಗ ಪತ್ತೆ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಉಸ್ಮಾನಾಬಾದ್ ನ ಆರೋಗ್ಯ ಸಿಬ್ಬಂದಿಗಳು ಡಿ ಹೆಚ್ ಓ ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಇಂದು ಕಲಬುರ್ಗಿ ಡಿ ಹೆಚ್ ಓ ರಾಜಶೇಖರ ಮಾಲಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ.
ಮನೆಯ ಬಾಡಿಗೆ ರೂಮ್ ನಲ್ಲಿ ಭ್ರೂಣಲಿಂಗ ಪತ್ತೆ ಯಂತ್ರ ಪತ್ತೆಯಾಗಿದೆ. ಆದರೆ ದಾಳಿ ವೇಳೆ ಕೊಠಡಿಯಲ್ಲಿ ಹಾಗೂ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಸಿಬ್ಬಂದಿಗಳೂ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಸಧ್ಯ ಮಷಿನ್ ವಶಕ್ಕೆ ಪಡೆದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.