alex Certify BIG NEWS : ರಾಜ್ಯದ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗಳ ಬಡ್ತಿ : ಎಲ್ಲಾ ಶಾಲೆಗಳಿಗೆ ‘ಶಿಕ್ಷಣ ಇಲಾಖೆ’ ಮಹತ್ವದ ಆದೇಶ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯದ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗಳ ಬಡ್ತಿ : ಎಲ್ಲಾ ಶಾಲೆಗಳಿಗೆ ‘ಶಿಕ್ಷಣ ಇಲಾಖೆ’ ಮಹತ್ವದ ಆದೇಶ.!

ಬೆಂಗಳೂರು : ರಾಜ್ಯದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗಳ ಬಡ್ತಿ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.

ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಲು ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಅರ್ಹಶಿಕ್ಷಕರ ಜೇಷ್ಠತಾ ಪಟ್ಟಿ ತಯಾರಿಸುವ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ(1) ರೀತ್ಯಾ ಸ್ನಾತಕೋತ್ತರ ಪದವಿ ಪಡೆದಿರುವ ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ನೀಡಲು ಪ್ರೌಢಶಾಲಾ ಸಹ ಶಿಕ್ಷಕರ ರಾಜ್ಯ ಮಟ್ಟದ ಒಂದೇ ಪಟ್ಟಿಯನ್ನು ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಗಳು 1957 ರ ನಿಯಮ 7-ಎ ರಡಿ ಸಿದ್ಧಪಡಿಸಲು ಸರ್ಕಾರದ ಪತ್ರದಲ್ಲಿ ಆದೇಶವಾಗಿರುತ್ತದೆ.
ಸದರಿ ಆದೇಶದ ಹಿನ್ನಲೆಯಲ್ಲಿ ಉಲ್ಲೇಖ-(2)ರ ದಿನಾಂಕ: 03/12/2024ರ ಸಭೆ ನಡವಳಿಯಂತೆ ಪ್ರೌಢಶಾಲಾ ಸಹ ಶಿಕ್ಷಕರ ಪಟ್ಟಿಯನ್ನು ವಿಭಾಗೀಯ ಸಹನಿರ್ದೇಶಕರು ಸಿದ್ಧಪಡಿಸಿ ಸಲ್ಲಿಸಲು ತಿಳಿಸಿದ್ದು, ಉಲ್ಲೇಖ(3) ರಲ್ಲಿ ನಮೂನೆ-1ರಲ್ಲಿ ಕೆಳಕಂಡ ಸೂಚನೆಗಳಂತೆ ಪಟ್ಟಿ ಸಿದ್ಧಪಡಿಸಿ ದಿನಾಂಕ: 26/12/2024 ರ ಒಳಗೆ ಸಲ್ಲಿಸಲು ತಿಳಿಸಲಾಗಿರುತ್ತದೆ.

1. ដ Excel format font-Times New Roman, All Caps, font size-12 ಸಿದ್ಧಪಡಿಸುವುದು.
2. ≈ 2, Date of Entry into previous cadre 있 Date of entry into present cadre ಗಳನ್ನು ದಿನಾಂಕ/ತಿಂಗಳು/ವರ್ಷ(dd/mm/yyyy) ಈ ಫಾರ್ಮಾಟ್ ನಲ್ಲೇ ನಮೂದಿಸುವುದು. ದಿನಾಂಕ, ತಿಂಗಳು ಮತ್ತು ವರ್ಷ ಇವುಗಳ ನಡುವೆ ಖಾಲಿ ಜಾಗ, ಚುಕ್ಕೆಗಳು ಮತ್ತು ಚಿಹ್ನೆಗಳಿದಲ್ಲಿ ಅವುಗಳನ್ನು ತೆಗೆದು ಕಡ್ಡಾಯವಾಗಿ ದಿನಾಂಕ/ತಿಂಗಳು/ವರ್ಷ ಈ ನಮೂನೆಯಲ್ಲೇ ಡೇಟಾ ನೀಡುವುದು.
3. Degree Subjects & Master Degree Subjects ಪದವಿಯ ವಿಷಯಗಳನ್ನು ಸರಿಯಾಗಿ ನಮೂದಿಸುವುದು.
4. ಆಯಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹಶಿಕ್ಷಕರುಗಳ ಮಾಹಿತಿಯನ್ನು ತಪ್ಪದೇ ನಮೂದಿಸುವುದು ಎಂದು ಸೂಚನೆ ನೀಡಲಾಗಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...