alex Certify BIG NEWS : ರಾಜ್ಯದ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ : ʻಪಿಜಿ ಕೋರ್ಸ್ ಖಾಸಗಿ ಕಾಲೇಜು ಶುಲ್ಕʼದಲ್ಲಿ ಭಾರೀ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯದ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ : ʻಪಿಜಿ ಕೋರ್ಸ್ ಖಾಸಗಿ ಕಾಲೇಜು ಶುಲ್ಕʼದಲ್ಲಿ ಭಾರೀ ಏರಿಕೆ

ಬೆಂಗಳೂರು : ಉನ್ನತ ಶಿಕ್ಷಣ ಇಲಾಖೆಯು ರಾಜ್ಯದ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ನೀಡಿದ್ದು, ಖಾಸಗಿ ಕಾಲೇಜುಗಳ ಶುಲ್ಕದಲ್ಲಿ 10 ಸಾವಿರ ರೂ. ಏರಿಕೆ ಮಾಡಿದ್ದು, ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.

2023-24ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿಗಳಾದ ಎಂ.ಬಿ.ಎ/ ಎಂ.ಸಿ.ಎ/ಎಂ.ಇ/ಎಂ.ಟೆಕ್ ಕೋರ್ಸುಗಳಿಗೆ ಸೀಟು ಹಂಚಿಕೆ, ಶುಲ್ಕ ನಿಗಧಿ ಮತ್ತು ಪ್ರವೇಶ ಪರೀಕ್ಷೆ ಪ್ರಕ್ರಿಯೆ ಕೈಗೊಳ್ಳುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (3) ರಲ್ಲಿನ ಸರ್ಕಾರಿ ಆದೇಶದಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿಗಳಾದ ఎం.ಬಿ.ಎ/ఎం.ಸಿ.ಎ/ಎಂ.ಇ/ಎಂ.ಟೆಕ್ ಕೋರ್ಸುಗಳಿಗೆ ಸೀಟು ಹಂಚಿಕೆ ಪ್ರಮಾಣ, ಪ್ರವೇಶ ಪ್ರಕ್ರಿಯೆ ಮತ್ತು ಬೋಧನಾ ಶುಲ್ಕವನ್ನು ನಿಗಧಿಪಡಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (4) ರಲ್ಲಿನ ಸರ್ಕಾರಿ ಆದೇಶದಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಎಂಬಿಎ, ಎಂಸಿಎ, ಎಂಇ & ಎಂ.ಟೆಕ್ ಕೋರ್ಸುಗಳ ಪ್ರವೇಶಾತಿ ಪರೀಕ್ಷೆಗಳ ಪ್ರಕ್ರಿಯೆಯನ್ನು ಸುಸುತ್ರವಾಗಿ ನಿರ್ವಹಿಸಲು ಪ್ರೊ. ಬಿ.ಡಿ ಕುಂಬಾರ, ಕುಲಪತಿಗಳು, ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ ಇವರ ಅಧ್ಯಕ್ಷತೆಯಲ್ಲಿ ಮೇಲುಸ್ತುವಾರಿ ಸಮಿತಿಯನ್ನು ರಚಿಸಿ ಆದೇಶಿಸಲಾಗಿರುತ್ತದೆ.

2023-24 ಶೈಕ್ಷಣಿಕ ಸಾಲಿನಲ್ಲಿಎಂಬಿಎ/ಎಂಸಿಎ/ಎಂ.ಇ/ಎಂ.ಟೆಕ್‌ ಸ್ನಾತಕೋತ್ತರ ಕೋರ್ಸುಗಳ ಸೀಟು ಹಂಚಿಕೆ ಪ್ರಮಾಣ, ಪ್ರವೇಶ ಪ್ರಕ್ರಿಯೆ ಮತ್ತು ಬೋಧನಾ ಶುಲ್ಕವನ್ನು ನಿಗದಿಪಡಿಸಲು ಸರ್ಕಾರವು ತಿರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2023-24ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿಗಳಾದ ఎం.బి.ఎ/ఎం.సి.ఎ./ఎం.ఇ./ఎం.ಟೆಕ್ ಕೋರ್ಸುಗಳ ಸೀಟು ಹಂಚಿಕೆ, ಶುಲ್ಕ ನಿಗಧಿ ಹಾಗೂ ಪ್ರವೇಶ ಪ್ರಕ್ರಿಯೆಯನ್ನು ಈ ಕೆಳಗಿನಂತೆ ಪರಿಗಣಿಸಿ ಆದೇಶಿಸಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...