ಬೆಂಗಳೂರು : ಸಾರ್ವಜನಿಕ ಆಸ್ಪತ್ರೆಗಳಲ್ಲಿ ‘CT Scan, MRI Scan’ ಗಳಿಗೆ ಶುಲ್ಕ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉಚಿತ ರೋಗ ಪತ್ತೆ ಮತ್ತು ಸೇವೆಗಳನ್ನು ಅನುಷ್ಠಾನಗೊಳಿಸಲು CT & MRI Scan ಸೇವೆಗಳನ್ನು ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ (PPP) ಮಾದರಿಯಲ್ಲಿ ಪಡೆಯಲು ಅನುಮೋದನೆ ನೀಡಲಾಗಿದೆ.ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಆದೇಶದಲ್ಲಿ 14 ಜಿಲ್ಲಾ ಆಸ್ಪತ್ರೆಗಳಲ್ಲಿ CT Scan ಅನ್ನು PPP ಮಾದರಿಯಲ್ಲಿ ಪ್ರತಿ Scan ಗೆ ರೂ. 1,550/- ದರದಲ್ಲಿ ಹಾಗೂ 5 ಜಿಲ್ಲಾ ಆಸ್ಪತ್ರೆಗಳಲ್ಲಿ MRI Scan ಅನ್ನು ಪ್ರತಿ Scan ಗೆ ರೂ. 3,000/- ದರದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.
ಆದೇಶಗಳಲ್ಲಿ ಹೊಸದಾಗಿ ರಾಜ್ಯದ 15 ಸಾರ್ವಜನಿಕ ಆಸ್ಪತ್ರೆಗಳಲ್ಲಿ MRI Scan ಸೇವೆಗಳನ್ನು ಹಾಗೂ 5 ಜಿಲ್ಲಾ ಆಸ್ಪತ್ರೆಗಳಲ್ಲಿ CT Scan ಸೇವೆಗಳನ್ನು ಸರ್ಕಾರದ ಸಹಭಾಗಿತ್ವದಲ್ಲಿ PPP ಮಾದರಿಯಲ್ಲಿ ರೂ. 47.41 ಕೋಟಿ ವೆಚ್ಚದಲ್ಲಿ 7 ವರ್ಷದ ಅವಧಿಗೆ ಟೆಂಡರ್ ಆಹ್ವಾನಿಸಿ ಕ್ರಮ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮುಂದುವರೆದು ದಿ: 23.02.2024 ರ ತಿದ್ದುಪಡಿ ಆದೇಶದಲ್ಲಿ 7 ವರ್ಷದ ಅವಧಿಗೆ ರೂ. 222.28 ಕೋಟಿಗಳ ವೆಚ್ಚದಲ್ಲಿ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.Scan ಮತ್ತು MRI Scan ಸೇವೆಗಳಿಗೆ PHH ಕಾರ್ಡ್ ಹೊಂದಿರುವ ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಹಾಗೂ ಇತರರಿಗೆ ಶೇಕಡ 70 ರಷ್ಟು ಶುಲ್ಕ ವಿಧಿಸಲು ಆದೇಶಿಸಲಾಗಿದೆ.
![](https://kannadadunia.com/wp-content/uploads/2025/02/1-7.jpg)
![](https://kannadadunia.com/wp-content/uploads/2025/02/2-5.jpg)