ಬೆಂಗಳೂರು : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ.. KGID ಬಗ್ಗೆ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಗೆ ಪಾವತಿಸಬೇಕಾದ ಕಡ್ಡಾಯ ಮಾಸಿಕ ಕನಿಷ್ಟ ವಿಮಾ ಕಂತು ಕಡಿಮೆ ಇದ್ದರೂ, ವಿಮೆ ಪಡೆಯದಿರುವುದು ಕಂಡು ಬಂದಿರುತ್ತದೆ. ಆದುದರಿಂದ. ಈ ಕೆಳಕಂಡ ಕೋಷ್ಟಕದಲ್ಲಿ ತಿಳಿಸಿರುವ ಕನಿಷ್ಟ ವಿಮಾ ಕಂತಿಗಿಂತ ಕಡಿಮೆ ಇದ್ದಲ್ಲಿ. ಕೂಡಲೇ 28ನೇ ಫೆಬ್ರವರಿ, 2025ರೊಳಗಾಗಿ ವಿಮೆ ಪಡೆಯುವಂತೆ ಮತ್ತೊಮ್ಮೆ ತಿಳಿಸಲಾಗುತ್ತಿದೆ.
ಏನಿದೆ ಸುತ್ತೋಲೆಯಲ್ಲಿ..?
ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು, 1958ಕ್ಕೆ ತಿದ್ದುಪಡಿ ಮಾಡಿ, ಆರ್ಥಿಕ ಇಲಾಖೆ ಹೊರಡಿಸಿರುವ ದಿನಾಂಕ: 23.10.2024ರ ಅಧಿಸೂಚನೆ ಸಂಖ್ಯೆ: ಆಇ/65/ಕವಿಇ/2024ರನ್ವಯ, 50 ವರ್ಷ ಮೀರದ ಎಲ್ಲಾ ಹಂತದ ಅಧಿಕಾರಿ/ನೌಕರರು ಅವರ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಗೆ ಪಾವತಿಸಬೇಕಾದ ಮಾಸಿಕ ಕನಿಷ್ಟ ವಿಮಾ ಕಂತು ಕಡಿಮೆ ಇದ್ದಲ್ಲ. ಕಡ್ಡಾಯವಾಗಿ ವಿಮೆ ಪಡೆಯುವಂತೆ ದಿನಾಂಕ:02.12.2024ರ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.
ಆದರೆ ಇದುವರೆವಿಗೂ, ಕೆಲವು ಅಧಿಕಾರಿ ಹಾಗೂ ನೌಕರರು ತಮ್ಮ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಗೆ ಪಾವತಿಸಬೇಕಾದ ಕಡ್ಡಾಯ ಮಾಸಿಕ ಕನಿಷ್ಟ ವಿಮಾ ಕಂತು ಕಡಿಮೆ ಇದ್ದರೂ, ವಿಮೆ ಪಡೆಯದಿರುವುದು ಕಂಡು ಬಂದಿರುತ್ತದೆ. ಆದುದರಿಂದ. ಈ ಕೆಳಕಂಡ ಕೋಷ್ಟಕದಲ್ಲಿ ತಿಳಿಸಿರುವ ಕನಿಷ್ಟ ವಿಮಾ ಕಂತಿಗಿಂತ ಕಡಿಮೆ ಇದ್ದಲ್ಲಿ. ಕೂಡಲೇ 28ನೇ ಫೆಬ್ರವರಿ, 2025ರೊಳಗಾಗಿ ವಿಮೆ ಪಡೆಯುವಂತೆ ಮತ್ತೊಮ್ಮೆ ತಿಳಿಸಲಾಗುತ್ತಿದೆ.
